ಹಾಸನ: ಮದ್ಯ ಸೇವಿಸಿದ ವಿಚಾರವನ್ನು ತಂದೆಯ ಬಳಿ ಹೇಳಿದ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಇಬ್ಬರು ದುಷ್ಕರ್ಮಿಗಳನ್ನು ಹಾಸನ (Hassan) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಚಿಕ್ಕಗೇಣಿಗೆರೆ ಗ್ರಾಮದ ಪುನೀತ್ (22) ಹಾಗೂ ಯಶ್ವಂತ್ (18) ಬಂಧಿತ ಆರೋಪಿಗಳು. ಕಳೆದ ಜು.31 ರಂದು ಗ್ರಾಮದ ಹರೀಶ್ ಎಂಬುವರು ಹೊಸ ಮನೆಯ ಕೆಲಸ ಪೂರ್ಣಗೊಂಡ ವಿಚಾರಕ್ಕೆ ಕೆಲವರನ್ನು ಊಟಕ್ಕೆ ಕರೆದಿದ್ದರು. ಅದೇ ಊರಿನವರಾದ ಪುನೀತ್, ಯಶ್ವಂತ್ ಹಾಗೂ ಪ್ರಕಾಶ್ ಅಲ್ಲಿಗೆ ಹೋಗಿದ್ದರು. ಹೋಗುವ ಮುನ್ನ ಮೂವರೂ ಒಟ್ಟಿಗೆ ಮದ್ಯಪಾನ ಮಾಡಿ ಜೊತೆಯಲ್ಲೇ ಊಟ ಮಾಡಿಕೊಂಡು ವಾಪಾಸ್ ಆಗಿದ್ದರು. ಇದನ್ನೂ ಓದಿ: ಟ್ರಕ್ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು – 22ರ ಯುವತಿ ದುರ್ಮರಣ
ಪ್ರಕಾಶ್ ಮನೆಯಲ್ಲಿದ್ದಾಗ ಆರೋಪಿ ಪುನೀತ್‍ನ ತಂದೆ ರಂಗಸ್ವಾಮಿ, ಪ್ರಕಾಶ್‍ಗೆ ಕರೆ ಮಾಡಿ ನಿನ್ನ ಜೊತೆ ಪುನೀತ್ ಮದ್ಯ ಕುಡಿದಿದ್ದಾನಾ? ಎಂದು ಕೇಳಿದ್ದಾರೆ. ಮೊದಲಿಗೆ ಇಲ್ಲ ಎಂದಿದ್ದ ಪ್ರಕಾಶ್, ಒತ್ತಾಯ ಮಾಡಿದ್ದಕ್ಕೆ ನಿಜ ಹೇಳಿದ್ದ. ಇದೇ ವಿಚಾರಕ್ಕೆ ಪುನೀತ್ ಹಾಗೂ ಯಶ್ವಂತ್ ಪ್ರಕಾಶ್ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದರು. ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಆತನ ತಲೆಯನ್ನು ಗೋಡೆಗೆ ಗುದ್ದಿಸಿದ್ದರು.
ಬಳಿಕ ಆತನನ್ನು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.1 ರಂದು ಸಂಜೆ ಆತ ಮೃತಪಟ್ಟಿದ್ದ. ಈ ಸಂಬಂಧ ಮೃತನ ಪತ್ನಿ ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
Web Stories