ಬೆಂಗಳೂರು: ಬಾಮೈದನೆ ತನ್ನ ಬಾವನನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ದೇವಾಂಗ ಬೀದಿಯಲ್ಲಿ ನಡೆದಿದೆ.
40 ವರ್ಷದ ಗಣೇಶ್ ಕೊಲೆಯಾದ ವ್ಯಕ್ತಿ. ಚಾಕುವಿನಿಂದ ಇರಿದು ಬಾಮೈದ ಆನಂದ್ ಕೊಲೆ ಮಾಡಿದ್ದಾನೆ. ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಾನೆ ಎಂದು ಮೃತ ಗಣೇಶ್ ನೆಲಮಂಗಲ ಪೊಲೀಸ್ ಠಾಣೆಗೆ ಬಾಮೈದ ಆನಂದ್ ವಿರುದ್ಧ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಆನಂದ್ ತನ್ನ ಬಾವನನ್ನು ಚಾಕುವಿನಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿದ್ದಾನೆ.
ಭಾನುವಾರ ರಾತ್ರಿ ಆರೋಪಿ ಆನಂದ್ ಕಂಠ ಪೂರ್ತಿ ಮದ್ಯದ ಅಮಲಿನಲ್ಲಿದ್ದನು. ಈ ವೇಳೆ ಬಾವ ಗಣೇಶ್ ಜೊತೆ ಜಗಳವಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೆಲಮಂಗಲ ಪಟ್ಟಣ ಪಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಆನಂದ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv