ಕಲಬುರಗಿ: ಫೇಸ್‍ಬುಕ್ ಮೂಲಕ ಪರಿಚಯವಾದ ಅಸ್ಸಾಂ ರಾಜ್ಯದ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಬಿಹಾರ ಮೂಲದ ಯುವಕ ಮಹಿಳೆಯನ್ನು ಕೊಲೆ ಮಾಡಿದ ಘಟನೆಯನ್ನು ಚಿಂಚೋಳಿ ಠಾಣೆ ಪೊಲೀಸರು ಭೇದಿಸಿದ್ದಾರೆ.
ಮೃತ ಮಹಿಳೆಯನ್ನು ಜಸ್ಮೀನಾ ಎಂದು ಗುರುತಿಸಲಾಗಿದೆ. ಉತ್ತರ ಭಾರತದ ಅಸ್ಸಾಂ ರಾಜ್ಯದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದ ಜಸ್ಮೀನಾಗೆ ಫೇಸ್ ಬುಕ್ ಮೂಲಕ ಬಿಹಾರ ರಾಜ್ಯದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕನ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸ ತೊಡಗಿದ್ದರು. ಇಬ್ಬರು ಕೂಡಿ ಸಂಸಾರ ನಡೆಸಲು ನಿರ್ಧರಿಸಿ ಒಂದೂವರೆ ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಆಗಮಿಸಿ ಒಂದು ತಿಂಗಳು ಸಂಸಾರ ನಡೆಸಿದ್ದರು. ಅದಾದ ಬಳಿಕ ನನ್ನನ್ನ ಮದ್ವೆಯಾಗು ಅಂತಾ ಜಸ್ಮಿನಾ ಮಹ್ಮದ್ ಜುಲ್ಫಿಕರ್‌ಗೆ ಒತ್ತಾಯಿಸಿದ್ದಾಳೆ. ಆದರೆ ಆಕೆ ಎಷ್ಟೇ ಒತ್ತಾಯ ಮಾಡಿದರೂ ಜುಲ್ಫಿಕರ್ ಮದುವೆಯಾಗಲು ನಿರಾಕರಿಸುತ್ತಾ ಬಂದಿದ್ದನು.
Advertisement
Advertisement
ಕಳೆದ ವರ್ಷ ಏಪ್ರಿಲ್ 5 ರಂದು ಜಸ್ಮಿನಾಳನ್ನು ಪೋಲಕಪಳ್ಳಿ ಬಳಿ ಮಹ್ಮದ್ ಜುಲ್ಫಿಕರ್ ಕರೆದುಕೊಂಡು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಅಲ್ಲಿಯೂ ಸಹ ಇಬ್ಬರ ಮಧ್ಯೆ ಜಗಳ ನಡೆದಿದೆ. ನಂತರ ಮಹ್ಮದ್ ಜುಲ್ಫಿಕರ್ ಜಸ್ಮೀನಾಳ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಸ್ಥಳದಿಂದ ಪರಾರಿಯಾಗಿದ್ದನು. ಇದನ್ನೂ ಓದಿ: ನೀರಿನ ಬಾಟಲಿಗೆ ಜಗಳ – ಚಲಿಸುವ ರೈಲಿನಿಂದ ಹೊರಗೆ ದೂಡಿದ ಸಿಬ್ಬಂದಿ
Advertisement
Advertisement
ಆರಂಭದಲ್ಲಿ ಜಸ್ಮಿನಾಳ ಮೃತದೇಹ ಯಾರದೆಂಬುದು ಪೊಲೀಸರಿಗೆ ತಿಳಿದಿರಲಿಲ್ಲ. ಹೀಗಾಗಿ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಅಷ್ಟಕ್ಕೂ ಚಿಂಚೋಳಿ ಮತ್ತು ತೆಲಂಗಾಣದ ಗಡಿ ಪೊಲೀಸ್ ಠಾಣೆಗಳಲ್ಲಿ ಯಾವುದಾದರೂ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆಯಾ ಎಂಬುದನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದರು. ಆದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರಲಿಲ್ಲ. ಹೀಗಾಗಿ ಪೊಲೀಸರು ಜಸ್ಮಿನಾಳ ಮೊಬೈಲ್ ನಂಬರ್ ಪಡೆದು ಕಾಲ್ ಡಿಟೈಲ್ ಸಂಗ್ರಹಿಸಿದರು. ಆಗ ಜಸ್ಮಿನಾ ಸಿಮ್ ಖರೀದಿ ಮಾಡಿದಾಗ ನೀಡಿದ ಫೋಟೊ ಸಂಗ್ರಹಿಸಿ ಮೃತದೇಹದ ಜೊತೆ ಹೋಲಿಕೆ ಮಾಡಿದಾಗ, ಮೃತದೇಹ ಜಸ್ಮಿನಾಳದ್ದೇ ಅಂತಾ ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಭಾರತದ ಜಲಗಡಿಗೆ ಬಂದಿದ್ದ ಪಾಕ್ ಯದ್ಧನೌಕೆಯನ್ನು ಓಡಿಸಿದ ಡಾರ್ನಿಯರ್
ನಂತರ ಆಕೆಯ ನಂಬರ್‌ಗೆ ಯಾವ ನಂಬರ್‌ನಿಂದ ಕರೆ ಬಂದಿದೆ ಅಂತಾ ಪರಿಶೀಲಿಸಿದಾಗ, ಆಕೆಯ ಪ್ರಿಯಕರ ಮಹ್ಮದ್ ಜುಲ್ಫಿಕರ್‌ನ ಮೊಬೈಲ್‍ನಿಂದ ಜಸ್ಮಿನಾಳ ಮೊಬೈಲ್‍ಗೆ ಎಂಟು ಸಲ ಕಾಲ್ ಬಂದಿರುವುದು ಪತ್ತೆಯಾಗಿದೆ. ತಕ್ಷಣವೇ ಅಲರ್ಟ್ ಆದ ಚಿಂಚೋಳಿ ಠಾಣೆ ಪೊಲೀಸರು, ಮಹ್ಮದ್ ಜುಲ್ಫಿಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಮಹ್ಮದ್ ಜುಲ್ಫಿಕರ್ ಒಪ್ಪಿಕೊಂಡಿದ್ದಾನೆ.