ಬಾಗಲಕೋಟೆ: ಕುಡುಕ ಸಹೋದರನನ್ನು ಡೀಸೆಲ್ ಹಾಕಿ ದೇಶ ಕಾಯುವ ಯೋಧನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಜಮಖಂಡಿ (Jamakhandi) ತಾಲ್ಲೂಕಿನ ಬಿದರಿ (Bidari) ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ಅನಿಲ್ ಪರಪ್ಪ ಕಾನಟ್ಟಿ(32) ಮೃತ ವ್ಯಕ್ತಿ. ಕುಡಿದ ಮತ್ತಲ್ಲಿ ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ. ಹೀಗಾಗಿ ಸಹೋದರ ಯೋಧ ಬಸವರಾಜ ಕಾನಟ್ಟಿ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ಸೆ.5ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹೋದರ ಬಸವರಾಜ ಕಾನಟ್ಟಿ ಯೋಧನಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದ. ಈ ವೇಳೆ ಕುಡುಕ ಸಹೋದರನ ಗಲಾಟೆ ತಾಳಲಾರದೆ ಈ ಕೃತ್ಯ ಎಸಗಿದ್ದಾರೆ. ಸಹೋದರ, ತಂದೆ ಹಾಗೂ ತಾಯಿ ಮೂವರು ಸೇರಿಕೊಂಡು ಡೀಸೆಲ್ ಸುರಿದು ಸುಟ್ಟು ಹಾಕಿ, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್ ಕೇಬಲ್ ತುಂಡು – ಭಾರತದ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್ ವ್ಯತ್ಯಯ
 


 
		 
		 
		 
		 
		
 
		 
		 
		 
		