ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ.
ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ ಈವರೆಗೆ 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.
Advertisement
ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
Advertisement
ಜಿಲ್ಲಾಧಿಕಾರಿಗಳಿಗೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅಂದು ಸ್ಥಳದಲ್ಲಿದ್ದವರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‍ಪಿ ಕೆಟಿ ಬಾಲಕೃಷ್ಣ ಮಾಹಿತಿ ನೀಡಿದರು.