ಹಾವೇರಿ: ಹೆತ್ತ ತಾಯಿಯನ್ನ ಸಲಿಕೆಯಿಂದ ಹೊಡೆದು ಹತ್ಯೆ ಮಾಡಿ ನಂತರ ತಲೆಮರೆಸಿಕೊಂಡು ಓಡಾಡ್ತಿದ್ದ ಪಾಪಿ ಪುತ್ರನನ್ನ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.
ಕರಿಯವ್ವ ಕಟಗಿ (65) ಮಗನಿಂದಲೇ ಕೊಲೆಯಾದ ತಾಯಿ. ಮಾರ್ಚ್ 16 ರಂದು ಕರಿಯವ್ವ ಕಟಗಿ ಅವರ ಪುತ್ರ ಕುಮಾರ್ ಕಟಗಿ ಹತ್ಯೆ ಮಾಡಿದ್ದನು. ನಂತರ ಆರೋಪಿ ಕುಮಾರ್ ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದನು. ಸೋಮವಾರ ಮನೆಯಲ್ಲಿ ಅವಿತುಕೊಂಡು ಕೂತಿದ್ದನು. ಈ ಬಗ್ಗೆ ತಿಳಿದು ಗ್ರಾಮಸ್ಥರು ಆರೋಪಿ ಕುಮಾರ್ ನನ್ನ ಹಿಡಿದು ಗುತ್ತಲ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
ಈ ವಿಷಯ ತಿಳಿದು ಸ್ಥಳಕ್ಕೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಬಾಸು ಚವ್ಹಾಣ ಆಗಮಿಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಮಾರ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.