ಶನಿವಾರ ನಟ ದರ್ಶನ್ (Actor Darshan) ಕೇರಳದ (Kerala) ಕಣ್ಣೂರಿನ (Kannur) ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ. ಈ ವೇಳೆ ದಾಸನ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ (Prajwal Rai) ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ:ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್
ಹೌದು, ಪುತ್ತೂರಿನ (Puttur) ಕಾಂಗ್ರೆಸ್ (Congress) ಮುಖಂಡ ಸವಣೂರು ಪ್ರಜ್ವಲ್ ರೈ ಎಂಬಾತ ನಟ ದರ್ಶನ್ ಅನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾನೆ. ಆದರೆ ಪ್ರಜ್ವಲ್ ರೈ ಓರ್ವ ಕೊಲೆ ಆರೋಪಿ. 2017ರಲ್ಲಿ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕರೋಪಾಡಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್ ರೈ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಸದ್ಯ ಈ ಆರೋಪಿ, ದರ್ಶನ್ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಆಸ್ಪದ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ದರ್ಶನ್, ಸಂಕಷ್ಟ ನಿವಾರಣೆಗಾಗಿ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜೊತೆ ತೆರಳಿ ಶತ್ರು ಸಂಹಾರ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಇಶಾನ್ ಕಿಶನ್ ಸ್ಫೋಟಕ ಶತಕ – ರಾಜಸ್ಥಾನ ವಿರುದ್ಧ ಹೈದರಾಬಾದ್‌ಗೆ 44 ರನ್‌ಗಳ ಭರ್ಜರಿ ಜಯ