ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ (Pavitra Gowda) ಕಣ್ಣೀರು ಹಾಕ್ತಿರುವ ಫೋಟೋ ಸದ್ಯ ರಿವೀಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹತ್ಯೆಯ ಕುರಿತಾದ ಹಲವು ಫೋಟೋಗಳು ಇತ್ತೀಚಿಗಷ್ಟೇ ಲಭ್ಯವಾಗಿದ್ದವು.ಇದನ್ನೂ ಓದಿ: ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ: ದರ್ಶನ್ ಪರ ನಿಂತ ಪ್ರೇಮ್
ಕೊಲೆ ಪ್ರಕರಣದಲ್ಲಿ ಭಾಗಿಯಾದ ಹಲವರ ಫೋನ್ ರಿಟ್ರೀವ್ ಮಾಡಿದ ಬಳಿಕ ಒಂದೊಂದಾಗಿ ಫೋಟೋಗಳು ಲಭ್ಯವಾಗುತ್ತಲೇ ಇವೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಭಿಕ್ಷೆ ಬೇಡಿದ ಫೋಟೋ, ಸಾವನ್ನಪ್ಪಿದ ಬಳಿಕ ಮೃತದೇಹ ಬಿಸಾಕಿದ್ದ ಫೋಟೋ, ಸ್ಥಳ ಮಹಜರು ಸಮಯದಲ್ಲಿ ಆರೋಪಿ ದರ್ಶನ್ ಇದ್ದ ಫೋಟೋ, ಹತ್ಯೆಗಾಗಿ ಬಳಸಿದ ಉಪಕರಣಗಳ ಫೋಟೋ ಹೀಗೆ ಹಲವಾರು ಫೋಟೋಗಳು ಹೊರಬಂದಿವೆ.
ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಪೊಲೀಸ್ ಕಸ್ಟಡಿಯ ಫೋಟೋ ಒಂದು ಲಭ್ಯವಾಗಿದೆ. ಎಪಿನಗರ ಪೊಲೀಸ್ ಠಾಣೆಯಲ್ಲಿ ಪವಿತ್ರಾಗೌಡ ಕಣ್ಣೀರಿಡುತ್ತಿದ್ದ ಫೋಟೋ ರಿವೀಲ್ ಆಗಿದೆ.ಇದನ್ನೂ ಓದಿ: ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ