ಬೆಂಗಳೂರು: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಲೋಪ ಆಗಿರೋದು ಸತ್ಯ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಅತ್ಯಂತ ಪ್ರಾಮಾಣಿಕ ಮತ್ತು ಸ್ಟ್ರಿಕ್ಟ್ ಆಫೀಸರ್‌ಗಳನ್ನು ಇಂಥ ಸ್ಥಳಕ್ಕೆ ಹಾಕಬೇಕು. ಆಗ ಮಾತ್ರ ಈ ರೀತಿ ಘಟನೆಗಳು ಆಗೋದಿಲ್ಲ. ಯಾರು ಸೌಲಭ್ಯಗಳನ್ನು ಕೊಟ್ಟಿದ್ದಾರೆ ಅಂಥ ಗೃಹ ಮಂತ್ರಿಗಳಿಗೆ ಗೊತ್ತಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಕೆಳಹಂತದ ಸಿಬ್ಬಂದಿಯನ್ನು ಅಮಾನತು ಮಾಡಿದರೆ ಪ್ರಯೋಜನ ಇಲ್ಲ. ಈ ಘಟನೆಯಲ್ಲಿ ಯಾವ ದೊಡ್ಡ ಅಧಿಕಾರಿ ಇದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಘಟನೆ ಮುಂದೆ ಆಗಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ, ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ: ಪ್ರದೀಪ್ ಈಶ್ವರ್ ಕಿಡಿ
ಡಿಜಿ ಅವರಿಗೆ ಈ ವಿಚಾರ ಎಲ್ಲ ಗೊತ್ತಿರುವುದಿಲ್ಲ. ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕಿತ್ತು. ಜೈಲಿಗೆ ಭೇಟಿ ಕೊಡಬೇಕು. ಅಧಿಕಾರಿಗಳನ್ನು ಕರೆದು ವಾರ್ನ್ ಮಾಡಬೇಕಿತ್ತು. ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ಘಟನೆ ಪುನರಾವರ್ತನೆ ಆಗದ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ. ಇದು ರಾಜ್ಯ ಸರ್ಕಾರದ ಹೊಣೆಯಲ್ಲ. ಆದರೆ ಲೋಪ ಆಗಿರೋದು ನಿಜ. ಅಲ್ಲಿ ಫೋನ್ ಇಟ್ಟುಕೊಂಡಿರೋದು ಸತ್ಯ. ಲೋಪ ಅಂತೂ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್‌ನನ್ನು ಬೇರೆ ಜೈಲಿಗೆ ಕಳಿಸಿ: ಸಿಎಂ ತಾಕೀತು
ಈ ಕೇಸ್‌ನಲ್ಲಿ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲೋ ಒಂದು ಕಡೆ ರೈಲ್ ಆಕ್ಸಿಡೆಂಟ್ ಆದಾಗ ರೈಲ್ವೆ ಸಚಿವರ ರಾಜೀನಾಮೆ ಕೇಳೋಕೆ ಆಗುತ್ತಾ? ಎಲ್ಲೋ ಜೈಲಲ್ಲಿ ಇಂತಹ ಘಟನೆಯಾದಾಗ ಗೃಹ ಮಂತ್ರಿ ರಾಜೀನಾಮೆ ಕೊಟ್ರೆ ದೇಶದಲ್ಲಿರುವ ಯಾವ ಸರ್ಕಾರ, ಯಾವ ಮಂತ್ರಿಗಳು ಕೂಡ ಕೆಲಸ ಮಾಡಲು ಸಾಧ್ಯವಿಲ್ಲ. ದರ್ಶನ್ ಪತ್ನಿ ಶಾಲೆಯ ಸೀಟ್ ವಿಚಾರಕ್ಕೆ ಡಿಸಿಎಂ ಭೇಟಿ ಮಾಡಿದ್ದು. ಸಾರ್ವಜನಿಕವಾಗಿ ಡಿಕೆಶಿ ಅವರು ಯಾವುದೇ ಹೇಳಿಕೆ ನೀಡಿಲ್ಲ. ಅವರ ಭೇಟಿ ಬಗ್ಗೆ ಡಿಸಿಎಂ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು : ದರ್ಶನ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ರೀತಿ ಮರುಕಳಿಸದಂತೆ ಮಾಡುತ್ತಾರೆ. ರಾಜಾತಿಥ್ಯ ನೀಡಲು ಸಚಿವರು ಒತ್ತಡ ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಸಚಿವರು ಕೂಡ ಒತ್ತಡ ಹಾಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದ.ಕೊರಿಯಾ ಆಟಗಾರರ ಜೊತೆ ಸೆಲ್ಫಿ – ಕ್ರೀಡಾಪಟುಗಳ ವಿರುದ್ಧ ಕ್ರಮಕ್ಕೆ ಮುಂದಾದ ಉ.ಕೊರಿಯಾ