ಶ್ರೀನಗರ: 2008ರಲ್ಲಿ ಸರಪಂಚ್ ಒಬ್ಬರನ್ನು ಹತ್ಯೆಗೈದಿದ್ದ ಆರೋಪಿಯನ್ನು 16 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸರು ಕಿಶ್ತ್ವಾರ್ ಜಿಲ್ಲೆಯಲ್ಲಿ ಇಂದು (ಜೂ.2) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇಶ್ವಾನ್‍ನ ನಿವಾಸಿ ಮೀರ್ ಹುಸೇನ್ ಎಂದು ಗುರುತಿಸಲಾಗಿದೆ. ಮೋಸ್ಟ್ ವಾಂಟೆಡ್ ಪರಾರಿಯಾಗಿದ್ದು, ಈತ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿ ಕಿಶ್ತ್ವಾರ್‌ನಲ್ಲಿ ಅಡಗಿರುವ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮುಂಬೈ ಸರಣಿ ಬಾಂಬ್ ಸ್ಫೋಟ ಕೇಸ್ – ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಜೈಲಿನಲ್ಲೇ ಹತ್ಯೆ!
ಬಂಧಿತ ಆರೋಪಿ 16 ವರ್ಷಗಳ ಹಿಂದೆ ನಾಗ್ನಿ ಘಡ್ ಕೇಶ್ವಾನ್ ಪ್ರದೇಶದ ಅಂದಿನ ಸರಪಂಚ್ ಬಶೀರ್ ಅಹ್ಮದ್ ಅವರನ್ನು ಅಪಹರಿಸಿ ಕೊಲೆಗೈದಿದ್ದ. ಬಳಿಕ ಹುಸೇನ್ ಭುಗತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ವಿರುದ್ಧ ರಣಬೀರ್ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ – ಆರೋಪಿಯ ಪೋಷಕರಿಗೆ ಜೂ.5 ರವರೆಗೆ ಪೊಲೀಸ್ ಕಸ್ಟಡಿ