Bengaluru City
ಮುರಳೀಧರ ರಾವ್ ನಮಗೆ ಬೇಡ- ಹೈಕಮಾಂಡ್‍ಗೆ ದೂರು ನೀಡಲು ರಾಜ್ಯ ನಾಯಕರು ಚಿಂತನೆ!

– ಮೇ 20ಕ್ಕೆ ಮತ್ತೆ ಸಮಾವೇಶ ಕರೆದ ಈಶ್ವರಪ್ಪ!
ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ದಿನೇ ದಿನೇ ಒಳಜಗಳದ ಕಾವು ಹೆಚ್ಚುತ್ತಿದೆ. ಇನ್ನು ರಾಜ್ಯದ ಕೆಲವು ಬಿಜೆಪಿ ನಾಯಕರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವ್ರನ್ನೇ ವಜಾ ಮಾಡುವಂತೆ ಹೈಕಮಾಂಡ್‍ಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಮತ್ತು ಈಶ್ವರಪ್ಪ ಬಣದ ಇಬ್ಬರು ಮುಖಂಡರಿಗೆ ಬಿಸಿ ಮುಟ್ಟಿಸಿದ್ರೂ, ಈಶ್ವರಪ್ಪನವರು ಮಾತ್ರ ತಮ್ಮ ಸಿಟ್ಟನ್ನ ಬಿಟ್ಟಿಲ್ಲ. ಮೇ 6 ಮತ್ತು 7 ರಂದು ಮೈಸೂರಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆದರೆ ಮೇ 20ರಂದು ಮತ್ತೆ ಪಕ್ಷ ಉಳಿಸಿ ಸಮಾವೇಶ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಬ್ರಿಗೇಡ್ ನಿಲ್ಲಿಸಲ್ಲ. ಮೇ 10ರೊಳಗೆ ಸಭೆ ಕರೆದು ಪಕ್ಷದೊಳಗಿನ ಗೊಂದಲ ನಿವಾರಿಸದಿದ್ರೆ ಸಮಾವೇಶ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಾತ್ರ ಎಲ್ಲವೂ ಸರಿಹೋಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.
