Sunday, 22nd July 2018

Recent News

ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು ಮುರಳಿ ವಿಜಯ್ ಟೀಂ ಇಂಡಿಯಾಗೆ ವಿಶ್ ಮಾಡಿದ್ದ ಟ್ವೀಟ್

ನವದೆಹಲಿ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ನಿದಾಸ್ ಕಪ್ ನ್ನು ಗೆದ್ದುಕೊಂಡಿದೆ. ನಿದಾಸ್ ಕಪ್ ಗೆದ್ದ ಭಾರತ ತಂಡಕ್ಕೆ ಹಿರಿಯ ಕ್ರಿಕೆಟ್ ಆಟಗಾರರು ವಿಶ್ ಮಾಡಿದ್ದಾರೆ. ಆದ್ರೆ ಕ್ರಿಕೆಟಿಗ ಮುರಳಿ ವಿಜಯ್ ಮಾಡಿರುವ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ವಿಕೇಟ್ ಕೀಪರ್ ಹಾಗು ಬ್ಯಾಟ್ಸ್‍ಮ್ಯಾನ್ ಆಗಿರುವ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಜಯಸಾಧಿಸಲು ಪ್ರಮುಖ ಪಾತ್ರವಹಿಸಿದ್ರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಂ ಇಂಡಿಯಾಗೆ ವಿಶ್ ಮಾಡುವದರ ಜೊತೆಗೆ ದಿನೇಶ್ ಕಾರ್ತಿಕ್ ಆಟಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು. ಮುರಳಿ ವಿಜಯ್ ಮಾತ್ರ ಕೇವಲ ಟೀಂ ಇಂಡಿಯಾಗೆ ಮಾತ್ರ ಶುಭಕೋರಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವೀಟ್ ನಲ್ಲಿ ಏನಿತ್ತು?: ಎಲ್ಲರೂ ಮೆಚ್ಚುವಂತಹ ಗೆಲವು ನಿಮ್ಮದು ಬಾಯ್ಸ್. ನಿಮ್ಮ ಆಟದ ಶೈಲಿ ಕ್ರಿಕೆಟ್ ನಲ್ಲಿ ಬ್ರ್ಯಾಂಡ್ ಸೃಷ್ಟಿಸಲಿದೆ ಅಂತಾ ಬರೆಯಲಾಗಿದೆ. ಟ್ಯಾಗ್ ನಲ್ಲಿಯೂ ದಿನೇಶ್ ಕಾರ್ತಿಕ್ ಅವರ ಹೆಸರನ್ನು ಮುರಳಿ ವಿಜಯ್ ಬಳಸಿಲ್ಲ.

ನಿಮ್ಮ ವೈಯಕ್ತಿಕ ದ್ವೇಷಗಳನ್ನು ಸೈಡಿಗೆ ಇಟ್ಟು, ಗೆಲುವಿಗೆ ಕಾರಣರಾದ ದಿನೇಶ್ ಕಾರ್ತಿಕ್ ಅವರಿಗೆ ವಿಶ್ ಮಾಡಿ ಅಂತಾ ಹಲವರು ಟ್ವೀಟ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್‍ರನ್ನು ಎಷ್ಟೇ ದ್ವೇಷಿಸಿದ್ರೂ, ನೀವು ಅವರ ಆಟಕ್ಕೆ ಸೆಲ್ಯೂಟ್ ಮಾಡ್ಲೇಬೇಕು. ನಿಮ್ಮ ವಿವಾದಗಳನ್ನು ಬದಿಗಿರಿಸಿ ಒಬ್ಬ ಭಾರತೀಯನಾಗಿ ಯೋಚಿಸಿ ದಿನೇಶ್ ಕಾರ್ತಿಕ್ ಹೆಸರನ್ನು ನಿಮ್ಮ ಟ್ವೀಟ್ ನಲ್ಲಿ ನೀವು ಬರೆಯಬಹುದಾಗಿತ್ತು ಅಂತಾ ಕೆಲವರು ಟ್ವೀಟ್ ಮೂಲಕ ಮುರಳಿ ವಿಜಯ್‍ಗೆ ಸಲಹೆಯನ್ನು ನೀಡಿದ್ದಾರೆ.

ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೇ 28 ರನ್ ಗಳಿಸಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.

Leave a Reply

Your email address will not be published. Required fields are marked *