ಸಿಡ್ನಿ: ಕ್ರಿಕೆಟ್ ಆಸ್ಟೇಲಿಯಾ ಇಲೆವೆನ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಮುರಳಿ ವಿಜಯ್ ಶತಕ ಸಿಡಿಸಿ ಮಿಂಚಿದ್ದಾರೆ.
ಮೊದಲ 50 ರನ್ ಗಳಿಸಲು 92 ಎಸೆತ ತೆಗೆದುಕೊಂಡ ವಿಜಯ್ ಬಳಿಕ 27 ಎಸೆತಗಳಲ್ಲೇ 50 ನ್ ಸಿಡಿಸಿ ಶತಕ ಹೊಡೆದಿದ್ದಾರೆ. ಪೃಥ್ವಿ ಶಾ ಗೈರಿನ ಹಿನ್ನೆಲೆಯಲ್ಲಿ ಮುರಳಿ ವಿಜಯ್ ಶತಕ ಸಿಡಿಸುವ ಮೂಲಕ ಆಯ್ಕೆಗಾರರ ಗಮನವನ್ನು ಈಗ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
That's all we've got from the tour game at The SCG. Wickets, runs under the belt and some quality time on the field. Action now shifts to Adelaide #TeamIndia #CAXIvIND pic.twitter.com/j0jXeDRcrd
— BCCI (@BCCI) December 1, 2018
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯ್, ಇಂದಿನ ಪಂದ್ಯದ ಬ್ಯಾಟಿಂಗ್ ಸಂತಸ ತಂದಿದೆ. ಡಿಸೆಂಬರ್ 6 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡಕ್ಕೆ ಕಾಣಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ಯುವ ಆಟಗಾರ ಪೃಥ್ವಿ ಶಾ ಗಾಯಗೊಂಡ ಹಿನ್ನೆಲೆಯಲ್ಲಿ ಮುರಳಿ ವಿಜಯ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಇತ್ತ ಪಂದ್ಯದಲ್ಲಿ ಮುರಳಿ ವಿಜಯ್‍ಗೆ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ ಅರ್ಧ ಶತಕ (62 ರನ್, 8 ಬೌಂಡರಿ, 5 ಸಿಕ್ಸರ್) ಸಿಡಿಸಿದರು. ಇಬ್ಬರ ಜೋಡಿ ಮೊದಲ ವಿಕೆಟ್ ಗೆ 109 ರನ್ ಪೇರಿಸಿತ್ತು.
Advertisement
ಪಂದ್ಯದಲ್ಲಿ ಒಟ್ಟಾರೆ 132 ಎಸೆತ ಎದುರಿಸಿದ ವಿಜಯ್ 16 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ 129 ರನ್ ಗಳಿಸಿದರು. ಉಳಿದಂತೆ ಹನುಮ ವಿಹಾರಿ 15 ರನ್ ಗಳಿಸಿ ಅಜೇಯರಾಗುಳಿದರು. ದಿನದಾಟ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು. ಇದರೊಂದಿಗೆ ನಾಲ್ಕು ದಿನಗಳ ಅಭ್ಯಾಸ ಡ್ರಾದಲ್ಲಿ ಅಂತ್ಯಗೊಂಡಿತು.ಇದನ್ನು ಓದಿ : ವಿಕೆಟ್ ಪಡೆದ ಕೊಹ್ಲಿ ಸಂಭ್ರಮಿಸಿದ್ದು ಹೀಗೆ – ವಿಡಿಯೋ
Advertisement
A century stand between Vijay and Rahul. Rahul brings up a vital half century. Vijay 43*. #TeamIndia 105/0 #CAXIvIND pic.twitter.com/ofWeZINzY0
— BCCI (@BCCI) December 1, 2018
ಸಂಕ್ಷಿಪ್ತ ಸ್ಕೋರ್:
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ – 358 ರನ್
ಕ್ರಿಕೆಟ್ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 544 ರನ್
ಭಾರತ ಎರಡನೇ ಇನ್ನಿಂಗ್ಸ್ – 211 ರನ್, 2 ವಿಕೆಟ್
ಫಲಿತಾಂಶ: ಡ್ರಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv