ಕೋಲಾರ: ಕಾಂಗ್ರೆಸ್‍ನಲ್ಲಿ (Congress) ಮನೆಯೊಂದು ನೂರಾರು ಬಾಗಿಲಾಗಿದೆ ಎಂದು ಕೋಲಾರದಲ್ಲಿ ಸಂಸದ ಮುನಿಸ್ವಾಮಿ (Muniswamy) ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‍ನಲ್ಲಿ ಒಂದು ಟೀಮ್ 20 ಜನರನ್ನ ಕರೆದುಕೊಂಡು ಒಂದು ಕಡೆ ಹೋದರೆ, ಇನ್ನೊಂದು ಟೀಂ ಹತ್ತು ಜನರನ್ನು ಕರೆದುಕೊಂಡು ಮತ್ತೊಂದು ಕಡೆ ಹೋಗುತ್ತಿದೆ. ಒಂದಷ್ಟು ಜನ ಮೂವರನ್ನು ಡಿಸಿಎಂ ಮಾಡಬೇಕು ಎಂದು ಎನ್ನುತ್ತಿದೆ. ಮತ್ತೊಂದು ಕಡೆ ಸಿಎಂನ್ನೇ ಬದಲಿಸಬೇಕು ಎನ್ನುತ್ತಿದೆ. ರಾಜ್ಯದ ಜನ ಈ ಬೆಳವಣಿಗೆಯನ್ನು ಕಂಡು ಬೇಸತ್ತಿದ್ದಾರೆ ಎಂದರು. ಇದನ್ನೂ ಓದಿ: ಶಿವಾನಂದ ಪಾಟೀಲ್ ಕಾಲಡಿಯಲ್ಲೇ ರಾಶಿ ರಾಶಿ ನೋಟುಗಳು – ಸಚಿವರೇ ಏನಿದು?
Advertisement
Advertisement
ಪಂಚರಾಜ್ಯಗಳಿಗೆ ನೀಡುತ್ತಿರುವ ಹಣ ಗುತ್ತಿಗೆದಾರರಿಂದ ಸಂಗ್ರಹಿಸಲಾಗುತ್ತಿದೆ. ಹಣ ನೀಡುವ ಸಲುವಾಗಿ ಗುತ್ತಿಗೆದಾರರಿಂದ 50%, 60% ಹಣ ಸಂಗ್ರಹಿಸುತ್ತಿದ್ದಾರೆ. ಹೀಗಿದ್ದರೂ ಬಿಜೆಪಿ ಮೇಲೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದೀಗ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಅವರ ಕೈಗೊಂಬೆಯಾಗಿರುವ ಕೆಂಪಣ್ಣ ಕೂಡ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಸರ್ಕಾರ ವಸೂಲಿಗೆ ಇಳಿದಿದೆ, ಇದರ ಏಜೆಂಟ್ ಆಗಿ ಸುರ್ಜೇವಾಲಾ ಅವರು ಐದು ರಾಜ್ಯಗಳಿಗೆ ಹಣ ಕಳಿಸುತ್ತಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Advertisement
Advertisement
ಈಗಿನ ಕಾಂಗ್ರೆಸ್ ಸರ್ಕಾರ 90% ಕಮಿಷನ್ ಸರ್ಕಾರ ಆಗಿದೆ. ಪೇ ಸಿಎಂ, ಪೇ ಡಿಸಿಎಂ, ಪೇ ಸುರ್ಜೇವಾಲಾ, ಪೇ ಕಾಂಗ್ರೆಸ್ ವಿರುದ್ಧ ಅವರದ್ದೇ ಪಕ್ಷದ ಸಚಿವರು ಶಾಸಕರು ಸಿಡಿದೆದ್ದಿದ್ದಾರೆ. ಹೀಗಾಗಿ ಒಂದೇ ಒಂದು ದಿನ ಇವರು ಅಧಿಕಾರದಲ್ಲಿ ಇರುವುದಕ್ಕೆ ನಾಲಾಯಕ್ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು
Web Stories