ಕೋಲಾರ: ಸನಾತನ ಧರ್ಮದ ವಿರುದ್ಧ ಮಾತಾಡಿದರೆ ಪಾಕಿಸ್ತಾನದ ಪರ ಇರುವವರು ಮತ ಕೊಡುತ್ತಾರೆ ಎಂಬ ಉದ್ದೇಶದಿಂದ ಉದಯನಿಧಿ ಸ್ಟಾಲಿನ್ (Udhayanidhi Stalin) ಮಾತಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ (Muniswamy) ವಾಗ್ದಾಳಿ ನಡೆಸಿದ್ದಾರೆ.
ಬಂಗಾರಪೇಟೆಯ ರೈಲ್ವೆ ನಿಲ್ದಾಣದಲ್ಲಿ ಎಕ್ಸಿಲೇಟರ್ ಲೋಕಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಬಿಜೆಪಿ ಹಿಂದೂಪರ ಇದೆ. ಆದರೆ ಐ.ಎನ್.ಡಿ.ಐ.ಎ (I.N.D.I.A) ಒಕ್ಕೂಟ ಪಾಕಿಸ್ತಾನದ ಪರ ಸಾಗುತ್ತಿದೆ. ಭಾರತದಲ್ಲಿ 800 ವರ್ಷ ಆಳ್ವಿಕೆ ನಡೆಸಿದ ಮಹಮ್ಮದ್ ಘಜ್ನಿಯಿಂದ ಸಹ ಹಿಂದೂ ಧರ್ಮ ನಾಶ ಮಾಡಲು ಸಾಧ್ಯವಾಗಿಲ್ಲ. ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ. ಆಲಿಬಾಬಾ 40 ಕಳ್ಳರ ತಂಡದ ಐ.ಎನ್.ಡಿ.ಐ.ಎ ಒಕ್ಕೂಟದ ಅಂತ್ಯಕಾಲ ಸಮೀಪದಲ್ಲೇ ಇದೇ ಎಂದಿದ್ದಾರೆ. ಇದನ್ನೂ ಓದಿ: ‘INDIA’ ಬಗ್ಗೆ ಭಯ ಬಂದು ಹೆಸರು ಬದಲಾವಣೆ: ಡಿಕೆಶಿ ಲೇವಡಿ
Advertisement
Advertisement
ರಿಪಬ್ಲಿಕ್ ಆಫ್ ಇಂಡಿಯಾ ಹೆಸರನ್ನು ರಿಪಬ್ಲಿಕ್ ಆಫ್ ಭಾರತ ಮಾಡುವ ವಿಚಾರವಾಗಿ, ಮೊದಲು ಈಸ್ಟ್ ಇಂಡಿಯಾ ಕಂಪನಿ ಎಂದು ನಾಮಕರಣ ಮಾಡಿಕೊಂಡಿದ್ದರು. ಈಗ ಭಾರತ ಎಂದರೆ ಇಡೀ ವಿಶ್ವಕ್ಕೆ ಗೊತ್ತಿದೆ. ಭಾರತ ಎಂದರೆ ಹಿಂದೂಸ್ತಾನ, ಇತಿಹಾಸ ಇರುವಂತಹ ದೇಶ. ಈ ಕೆಲಸಕ್ಕೆ ಬಾರದವರು ಯುಪಿಎ ಸರ್ಕಾರ ಇದ್ದಾಗ ಯುಪಿಎ1, ಯುಪಿಎ2 ಎಂದು ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದರು. ಅದನ್ನು ತೊಳೆದುಕೊಳ್ಳುವ ನಿಟ್ಟಿನಲ್ಲಿ ಹೊಸ ಹೆಸರು ಐ.ಎನ್.ಡಿ.ಐ.ಎ ಎಂದು ಇಟ್ಟುಕೊಂಡಿದ್ದಾರೆ. ಭಾರತ ಎಂದರೆ ವಿರೋಧ ಮಾಡುವವರು ಯಾರೂ ಇಲ್ಲ. ಹೀಗಾಗಿ ಮರುನಾಮಕರಣ ಮಾಡಲು ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ.
Advertisement
Advertisement
ಈ ವೇಳೆ ವಿಧಾನ ಪರಿಷತ್ ಸದಸ್ಯ ಇಂಚರ್ ಗೋವಿಂದರಾಜು, ಛಲವಾದಿ ನಾರಾಯಣಸ್ವಾಮಿ ಸಹ ಸಂಸದರಿಗೆ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ: ದೆಹಲಿ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಉಳ್ಳ ನಗರ – 400 ಬಸ್‌ಗಳಿಗೆ ಚಾಲನೆ
Web Stories