ಚಿತ್ರದುರ್ಗ: ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ. ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದ ಬಿಜೆಪಿ ಕಚೇರಿ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ. ಅದಕ್ಕೆ ಅವರು ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ. ಚುನಾವಣೆಗೆ ತುಂಬಾ ದೂರ ಇದೆ. ನಾವು ಚುನಾವಣೆಯ ಸಮೀಪದಲ್ಲಿಲ್ಲ. ಜನಸೇವೆ ಮಾಡಲು ಬಹಳಷ್ಟು ಸಮಯ ನಮಗಿದೆ. ಸರ್ಕಾರದಿಂದ ನಮ್ಮ ಬಳಿ ಅವರು ಬರ್ತಾರೆ, ಇವರು ಬರ್ತಾರೆ ಅನ್ನೋದು ಸರಿಯಲ್ಲ. ಸಾರ್ವಜನಿಕರಿಗೆ ಸರ್ಕಾರದಿಂದ ಸಹಕಾರಿಯಾಗುವ ಸಲಹೆ ನೀಡಲಿ. ಕಾಂಗ್ರೆಸ್ಸಿಗರಿಗೆ ಅಧಿಕಾರ ದಾಹ ಬಿಟ್ಟರೆ ಬೇರೊಂದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್
Advertisement
Advertisement
ನಮ್ಮ ಪಕ್ಷದಲ್ಲಿರುವವರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯಿಲ್ಲ. ಬಿಜೆಪಿಯಲ್ಲಿರೋರು ಒಗ್ಗಟ್ಟಾಗಿ ಸಂತೋಷದಿಂದ ಕೆಲಸ ಮಾಡ್ತಿದ್ದೇವೆ. ನಮಗೆ ಬಿಜೆಪಿ ಗೌರವ ಕೊಟ್ಟಿದೆ. ಗೌರವಕ್ಕೆ ತಕ್ಕಂತೆ ನಾವು ನಡೆದುಕೊಳ್ತೀವಿ ಎಂದು ಉತ್ತರಿಸಿದರು. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಅವರನ್ನೇ ನಾವು ಕೇಳಬೇಕು. ಅವರ ಸಂಪರ್ಕಕ್ಕೆ ಕಾಂಗ್ರೆಸ್ ಶಾಸಕರು ಇದ್ದಾರೆ ಎಂಬ ವಿಚಾರ ನಮಗೆ ತಿಳಿದಿಲ್ಲ. ಇವುಗಳ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ ಹಾಗು ಸಿಎಂ ಪರಮಾಧಿಕಾರ ಕುರಿತು ಮಾತನಾಡಿದ ಅವರು, ಪಕ್ಷದಲ್ಲಿ ಏನೇ ತೀರ್ಮಾನ ತಗೊಂಡ್ರು ನಾವು ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡ್ತೀವಿ. ಸಂಪುಟ ಪುನರ್ ರಚನೆ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ
ನೂತನ ಜಿಲ್ಲಾ ಉಸ್ತುವಾರಿಗಳ ನೇಮಕ ವಿಚಾರವಾಗಿ ಮಾತನಾಡಿದ ಅವರು, ಉಸ್ತುವಾರಿ ಬದಲಾವಣೆ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ, ಅಸಮಾಧಾನ ಇಲ್ಲ. ಎಲ್ಲರು ಅವರವರ ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡ್ತಿದ್ದಾರೆ ಎಂದರು.