ಕೋಲಾರ: ಅದು ಮೇಕೆದಾಟಲ್ಲ, ಮೇಕೆ ನಾಟಕ ಪಾದಯಾತ್ರೆ ಎಂದು ನಗರದ ಉಸ್ತುವಾರಿ ಸಚಿವ ಮುನಿರತ್ನ ವ್ಯಂಗ್ಯವಾಡಿದರು.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮ. ಕಾಂಗ್ರೆಸ್ ರಾಜ್ಯದಲ್ಲಿ 5 ವರ್ಷ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ. ಈಗ ಈ ಪಾದಯಾತ್ರೆ ಒಂದು ರಾಜಕೀಯ ಪ್ರೇರಿತವಾಗಿದೆ. ಕೈ ಪಕ್ಷದವರು ಖಾಲಿಯಾಗಿದ್ದಾರೆ ಕೆಲಸ ಬೇಕಾಗಿತ್ತು ಅದಕ್ಕೆ ನಾಟಕ ಶುರು ಮಾಡಿದ್ದಾರೆ ಎಂದರು. ಇದನ್ನೂ ಓದಿ: ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ
Advertisement
ಮೇಕೆದಾಟು ಇವತ್ತಿನ ಸಮಸ್ಯೆ ಅಲ್ಲ, ತುಂಬಾ ಹಳೆಯ ವಿಚಾರವಾಗಿದೆ. ಮುಂದೆ ತಮ್ಮ ಸರ್ಕಾರ ಬರಲ್ಲ ಎಂದು ಗೊತ್ತಾಗಿದೆ. ಹೀಗಾಗಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕಾಂಗ್ರೆಸ್ ಮೇಕೆದಾಟು ಹೆಸರಲ್ಲಿ ದೊಡ್ಡ ನಾಟಕ ಮಾಡುತ್ತಿದೆ. ಇವರ ಯಾವ ಕನಸುಗಳು ಈಡೇರಲ್ಲ. ಕೊರೊನಾ ಸಂಕಷ್ಟದ ಮಧ್ಯೆ ಮೇಕೆದಾಟು ಪಾದಯಾತ್ರೆ ಬೇಕಿತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ
ಇದೇ ವೇಳೆ ವೀಕೆಂಡ್ ಕರ್ಫ್ಯೂ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ನಿಯಮಗಳನ್ನ ತಪ್ಪದೆ ಎಲ್ಲರೂ ಪಾಲನೆ ಮಾಡಬೇಕು. ಕೋವಿಡ್-19 2 ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿರುವ ಸರ್ಕಾರ 3 ನೇ ಅಲೆಯನ್ನು ಸಹ ಯಶಸ್ವಿಯಾಗಿ ಎದುರಿಸಲಿದೆ ಎಂದು ನುಡಿದರು.