ಕೋಲಾರ: ರಾಜ್ಯದಲ್ಲಿ ಕೆಲವು ವಿಚಾರಗಳ ಕುರಿತು ಹೋರಾಟಗಳು ನಡೆಯುತ್ತಿವೆ. ಅದು ಧರ್ಮ ಸಂಘರ್ಷ ಅನ್ನೋದು ಸರಿಯಲ್ಲ. ರಾಜ್ಯದ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿದೆ. ಇದಕ್ಕೆ ಸರ್ಕಾರ ಹೊಣೆ ಅಲ್ಲ ಎಂದು ಕೋಲಾರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂದ್ರು ಕೊಲೆ ಪ್ರಕರಣ ಗೃಹ ಸಚಿವರಿಗೆ ಇರುವ ಮಾಹಿತಿಯನ್ನ ಹೇಳಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವವರು ಅಸಮರ್ಥರು ಎಂದು ಮಾತನಾಡುವುದು ಸರಿಯಲ್ಲ. ಬೆಲೆ ಏರಿಕೆ ಸಹಜ, ಯಾವ ಸರ್ಕಾರದಲ್ಲಿ ಬೆಲೆ ಏರಿಕೆಯಾಗಿಲ್ಲ ಹೇಳಿ?. ಅಗತ್ಯ ವಸ್ತುಗಳು ಕಾಲಕಾಲಕ್ಕೆ ತಕ್ಕಂತೆ ಕಡಿಮೆಯಾಗಲಿದೆ. ಎಲ್ಲವನ್ನೂ ಹೊರ ದೇಶಗಳಿಂದ ರಫ್ತು ಮಾಡಿಕೊಳ್ಳಬೇಕಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್ ತಂದೆ
ಸಚಿವ ಸಂಪುಟ ವಿಸ್ತರಣೆ ಮಾಹಿತಿ ಇಲ್ಲ. ಯಾಕಂದ್ರೆ ಅದರ ಬಗ್ಗೆ ಚರ್ಚೆ ನಡೆದಿಲ್ಲ. ಚಂದ್ರಾರೆಡ್ಡಿಗೆ ಒಂದು ಸ್ಥಾನಮಾನ ಕೊಡಿಸುವುದು ನನ್ನ ಜವಬ್ದಾರಿ ಅದು ಮಾತನಾಡುವೆ. ವರ್ತೂರು ಪ್ರಕಾಶ್ ಅವರ ಸೇರ್ಪಡೆ ವರಿಷ್ಠರ ಬಳಿ ಮಾತನಾಡಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.