– ಮೋದಿ, ಬೊಮ್ಮಾಯಿಯಿಂದ ಬೆಂಗಳೂರಿಗೆ ಹೆಚ್ಚು ಗಮನ: ಸಚಿವ
– ಫೆ. 23ರಂದು ಬಳ್ಳಾರಿಗೆ ಅಮಿತ್ ಶಾ : ಸಿದ್ದರಾಜು
– ಫೆ. 23ರಂದು ಬಳ್ಳಾರಿಗೆ ಅಮಿತ್ ಶಾ : ಸಿದ್ದರಾಜು
ಬೆಂಗಳೂರು: ನನ್ನ ವಿರುದ್ಧ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್ (DK Suresh) ಇಬ್ಬರೂ ಬಂದು ಸ್ಪರ್ಧೆ ಮಾಡಲಿ ಎಂದು ಸಚಿವ ಮುನಿರತ್ನ (Munirathna) ಸವಾಲು ಹಾಕಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಕುಸುಮಾರನ್ನು ಗೆಲ್ಲಿಸೋದು ಯಾಕೆ? ಬೇಕಿದ್ರೆ ನನ್ನ ವಿರುದ್ಧ ಡಿಕೆಶಿ ಹಾಗೂ ಸಂಸದ ಡಿಕೆ ಸುರೇಶ್ ಇಬ್ಬರೂ ಬಂದು ಸ್ಪರ್ಧೆ ಮಾಡಲಿ. ಒಬ್ಬರು ಯಾಕೆ, ಇಬ್ಬರೂ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಈಗಾಗಲೇ ಈ ಹಿಂದೆ ಬಂದು ಎಷ್ಟು ಅಂತರದಿಂದ ಸೋತಿದ್ದಾರೆ ಎಂಬುದು ಗೊತ್ತಿದೆಯಲ್ಲ. ಚುನಾವಣೆ ಸಂದರ್ಭ, ಏನೇನೋ ಕದ್ದ ಅಂತಾ ವಿರುದ್ಧ ಆರೋಪ ಮಾಡುತ್ತಾರೆ. ಬೇಕಿದ್ದರೆ ಮೆಟ್ರೋ ಕದ್ದ ಅಂತಲೂ ಹೇಳುತ್ತಾರೆ. ಮುಂದೆ ಇನ್ನೂ ಜಾಸ್ತಿ ಆರೋಪ ಮಾಡುತ್ತಾರೆ. ಇದಕ್ಕೆಲ್ಲ ಯಾರೂ ತಲೆಕೆಡೆಸಿಕೊಳ್ಳಲ್ಲ ಎಂದರು.
Advertisement
Advertisement
ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧ: ಕೋಲಾರದಲ್ಲಿ (Kolar) ಮುನಿರತ್ನ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವರಿಷ್ಠರು ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ. ನನ್ನ ಪಕ್ಷ ಎಲ್ಲಿ ಹೋಗು ಎನ್ನುತ್ತಾರೋ ಅಲ್ಲೇ ಹೋಗಿ ಸ್ಪರ್ಧೆ ಮಾಡ್ತೇನೆ. ಪಕ್ಷ ದೊಡ್ಡದು. ಹೀಗಾಗಿ ಪಕ್ಷದ ಸೂಚನೆ ಪಾಲಿಸುತ್ತೇನೆ. ಕೋಲಾರಕ್ಕೆ ಹೋಗು ಅಂದ್ರೆ ಹೋಗುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗು ಅಂದ್ರೂ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
Advertisement
265 ಕಡೆ ಜನೌಷಧ ಕೇಂದ್ರ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬೆಂಗಳೂರಿಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. 265 ಕಡೆ ಜನೌಷಧ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಮೂಲಕ ಸಾರ್ವಜನಿಕರಿಗೆ ಸೌಲಭ್ಯ ತಲುಪಿಸುವ ಕೆಲಸ ಆಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಸೂಚ್ಯಂಕದಲ್ಲಿ 25 ನಗರದಲ್ಲಿ ಬೆಂಗಳೂರಿನ ಹೆಸರಿದೆ. ಜನತೆಗೆ ಇನ್ನೂ ಹತ್ತಿರವಾಗಲು ಏನೆಲ್ಲಾ ಕಾರ್ಯಕ್ರಮ ರೂಪಿಸಬೇಕು ಅಂತ ಪಟ್ಟಿ ಮಾಡಿದ್ದೇವೆ. ಎಂಟು ಸಾವಿರ ರಾಜಕಾಲುವೆಗೆ, 110 ಹಳ್ಳಿಗಳ ರಸ್ತೆಗೆ 9 ಸಾವಿರ ಕೋಟಿ ಹಣ ನೀಡಿದ್ದಾರೆ. ಇಷ್ಟು ಹಣವನ್ನು ಯಾವ ಸರ್ಕಾರ ಕೂಡ ನೀಡಿರಲಿಲ್ಲ. ಐದು ಸಾವಿರ ಕೋಟಿ ವೆಚ್ಚದಲ್ಲಿ 775 ಎಂಎಲ್‍ಡಿ ನೀರು ತರಲು ಕ್ರಮ ಕೈಗೊಂಡಿದ್ದೇವೆ. 775 ಎಂಎಲ್‍ಡಿ ನೀರನ್ನು ತರುವುದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
Advertisement
ಬಜೆಟ್‍ನಲ್ಲಿ ಬೆಂಗಳೂರಿಗೆ ಕೊಟ್ಟ ಅನುದಾನ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರಿಗೆ 6 ಸಾವಿರ ಕೋಟಿ ಕೊಟ್ಟಿದ್ದಾರೆ. ಇಷ್ಟೊಂದು ಅನುದಾನ ಹಿಂದಿನ ಯಾವ ಮುಖ್ಯಮಂತ್ರಿಗಳೂ ಇಷ್ಟೊಂದು ಅನುದಾನ ಕೊಟ್ಟಿಲ್ಲ. ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಂಡವಾಳ ಹರಿದುಬರುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದ್ದು, 5 ಸಾವಿರ ಕೋಟಿ ವೆಚ್ಚದಲ್ಲಿ ಟರ್ಮಿನಲ್ 2 ನಿರ್ಮಾಣ ಮಾಡಿದ್ದೇವೆ. 2022ರಲ್ಲಿ ಪ್ರಧಾನಿಯಿಂದ ಉದ್ಘಾಟನೆ ಆಗಿದೆ. ಬಿಜೆಪಿ ಸರ್ಕಾರ ರೈಲ್ವೆ ಜೋಡಿ ಮಾರ್ಗ ಯೋಜನೆಗೆ ಆದ್ಯತೆ ನೀಡಿದೆ ಎಂದು ಹೇಳಿದರು.
ನಗರದ ಸುರಕ್ಷತೆಗೆ ಹೆಚ್ಚು ಒತ್ತು: ಬೆಂಗಳೂರು ನಗರದ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇದರಿಂದ ಕ್ರೈಮ್ ರೇಟ್ ಕಡಿಮೆ ಆಗಲಿದೆ. 1,600 ಸೂಕ್ಷ್ಮ ಪ್ರದೇಶ ಗುರುತಿಸಿ ಸಿಸಿ ಕ್ಯಾಮೆರಾ ಹಾಕಲಾಗಿದೆ. 5ಜಿ ನೆಟ್ವರ್ಕ್ ಮುಖಾಂತರ ಪರೀಕ್ಷೆ ಕೂಡ ಮಾಡಲಾಗಿದೆ. 5ಜಿ ನೆಟ್ವರ್ಕ್ ಮಾಡಿರುವದರಲ್ಲಿ ಭಾರತದಲ್ಲಿ ನಾವು ಮೊದಲಿಗರು ಎಂದ ಅವರು, ಗುಂಡಿ ಮುಕ್ತ ಬೆಂಗಳೂರು ನಗರಕ್ಕೆ 120 ಕಿ.ಮೀ ವೈಟ್ ಟಾಪಿಂಗ್ ಮಾಡಲಾಗಿದ್ದು, 400 ಕೋಟಿ ವೆಚ್ಚದಲ್ಲಿ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಲಾಗಿದೆ ಎಂದರು.
ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ: ಜನರಿಗೆ ಕಾಂಗ್ರೆಸ್‍ನವರೇ ಸಂದೇಶ ಕೊಡುತ್ತಿದ್ದಾರೆ. ಅದಕ್ಕೆ ಕೇಸರಿ ಹೂ ಅನ್ನು ತಮ್ಮ ಕಿವಿ ಮೇಲೆ ಇಟ್ಕೊಂಡಿದ್ದಾರೆ. ಡಿಕೆಶಿ ಅವ್ರು ನಾಲ್ಕು ನಾಲ್ಕು ಹೂ ಇಟ್ಕೊಂಡಿದ್ದು ಅದಕ್ಕೇ ಎಂದ ಅವರು, ಕಾಂಗ್ರೆಸ್‍ನವ್ರು ಎಲ್ಲ ಕಡೆ ಬುರುಡೆ ಬಿಡುತ್ತಿದ್ದಾರೆ. 130-140 ಸ್ಥಾನ ತಗೆದುಕೊಳ್ಳುವವರು ಏನಕ್ಕೆ ಎಲ್ಲರ ಮನೆಗೆ ಹೋಗಿ ಬನ್ನಿ ಬನ್ನಿ ಎನ್ನಬೇಕು. ಬಿಜೆಪಿಯ ಒಂದು ಸಣ್ಣ ಕಾರ್ಯಕರ್ತನೂ ಕಾಂಗ್ರೆಸ್‍ಗೆ ಹೋಗಲ್ಲ. ಇನ್ನು ನಾವು ಏನಾದರೂ ಕೈ ಹಾಕೋಕೆ ಹೋದ್ರೆ ಕಾಂಗ್ರೆಸ್ ಅರ್ಧನೂ ಇರಲ್ಲ. ಈಗಾಗಲೇ ನಾವು ಅದನ್ನು ಮಾಡಿ ತೋರಿಸಿದ್ದೇವೆ. ಎಲ್ಲ ಭಾಗ್ಯಗಳು ಕೊಟ್ಟಾಗಗಲೇ 80 ಸ್ಥಾನ ಬಂದ್ದಿದ್ದವು. ಈಗ ಎಲ್ಲಿಂದ 130 ಸೀಟು ಬರುತ್ತದೆ. ನಾವೇ ಮತ್ತೆ ಸರ್ಕಾರ ರಚನೆ ಮಾಡುತ್ತದೆ. ನಮ್ಮ ಸಂಪರ್ಕದಲ್ಲಿರೋರನ್ನು ಬಿಜೆಪಿಗೆ ಕರೆತಂದ್ರೆ, ಕಾಂಗ್ರೆಸ್ ಕಚೇರಿಗೆ ಬಾಗಿಲು ಮುಚ್ಚಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಮಡಿಕೇರಿ ಫರ್ನಿಚರ್ ಅಂಗಡಿಯಲ್ಲಿ ಅವಘಡ – 7 ಗಂಟೆ ಕಾರ್ಯಾಚರಣೆ ನಡೆಸಿದ್ರೂ ನಿಯಂತ್ರಣಕ್ಕೆ ಬಾರದ ಅಗ್ನಿ
ಸರ್ಕಾರದಿಂದ ಕಠಿಣ ಕ್ರಮ: ರೂಪಾ ಮತ್ತು ರೋಹಿಣಿ ಕಚ್ಚಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ಕೊಳಾಯಿ ಬಳಿ ಜಡೆ ಜಗಳ ಅಂತ ಕೇಳಿದ್ದೆವು. ಆದರೆ ಇವರೇ ಹೀಗೆ ಕಚ್ಚಾಡ್ತಿದ್ರೆ ಜನ ಏನು ಅನ್ಕೋಬೇಕು? ಈ ರೀತಿ ಕಚ್ಚಾಡಿದ್ರೆ ಐಪಿಎಸ್, ಐಎಎಸ್ ವಲಯದ ಮೇಲೆ ಜನ ಏನು ಅನ್ಕೋಬೇಕು. ಇವರಿಬ್ಬರ ಜಗಳ ಸರ್ಕಾರದ ಗಮನದಲ್ಲಿದೆ. ಸರ್ಕಾರದಿಂದ ಕ್ರಮ ಆಗುತ್ತೆ ಎಂದು ಹೇಳಿದರು.
ಫೆ.23ಕ್ಕೆ ಬಳ್ಳಾರಿಗೆ ಅಮಿತ್ ಶಾ: ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಫೆ.23ರಂದು ಅಮಿತ್ ಶಾ (Amit Shah) ಬಳ್ಳಾರಿಯ ಸಂಡೂರಿಗೆ ಬರುತ್ತಿದ್ದಾರೆ. ಸಂಡೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸಂಜೆ ಬೆಂಗಳೂರಿಗೆ ಬರುತ್ತಾರೆ. ಅಮಿತ್ ಶಾ 23 ರಂದು ಮಧ್ಯಾಹ್ನ 2.30ಕ್ಕೆ ಬಳ್ಳಾರಿ ಭಾಗದ ಪ್ರಮುಖರ ಜೊತೆ ಸಭೆ ಮಾಡ್ತಾರೆ. ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಟೌನ್ ಹಾಲ್‍ನಲ್ಲಿ ಪ್ರಬುದ್ಧರು ಚರ್ಚಾ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಡಬದಲ್ಲಿ ಕಾಡಾನೆ ದಾಳಿ – ಯುವತಿ ಸಹಿತ ಇಬ್ಬರ ಸಾವು
LIVE TV
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k