ಬೆಂಗಳೂರು: ಶಾಸಕ ಮುನಿರತ್ನ (Munirathna) ಮೇಲೆ ಮೊಟ್ಟೆ ಎಸೆತ ಪ್ರಕರಣದ ತನಿಖೆಯನ್ನು ನಂದಿನಿ ಲೇಔಟ್ ಪೊಲೀಸರು ಚುರುಕುಗೊಳಿಸಿದ್ದಾರೆ.
ಶನಿವಾ (ಡಿ.28) ಇವತ್ತು ಶಾಸಕ ಮುನಿರತ್ನ ಸಮ್ಮುಖದಲ್ಲಿ ಸ್ಥಳ ಮಹಜರು ನಡೆದಿದೆ. ಈ ವೇಳೆ ನನ್ನ ಮೇಲೆ ಆಸಿಡ್ ದಾಳಿ ಎಂದು ಮುನಿರತ್ನ ವಿವರಿಸಿದ್ದಾರೆ. ಮುನಿರತ್ನ ಹೇಳಿಕೆಯನ್ನು ಪೊಲೀಸರು ವಿಡಿಯೋ ಮೂಲಕ ದಾಖಲಿಸಿದ್ದಾರೆ. ಇದನ್ನೂ ಓದಿ: ಅಣ್ಣ-ತಮ್ಮ ಬೇರೆ ಆಗಿದ್ದೀವಿ ಅಂತ ಯಾರು ಹೇಳಿದ್ದು?; ದರ್ಶನ್ ಜೊತೆ ಮನಸ್ತಾಪ ಇಲ್ಲ ಎಂದ ದಿನಕರ್ ತೂಗುದೀಪ
ಇನ್ನೂ ಮೊಟ್ಟೆ ದಾಳಿಯಲ್ಲಿ ಡಿಕೆ ಸುರೇಶ್ ಕೈವಾಡ ಇದೆ ಎಂಬ ಆರೋಪಕ್ಕೆ ಮಾಜಿ ಸಂಸದ ತಿರುಗೇಟು ನೀಡಿದ್ದಾರೆ. ಸಿಬಿಐ ತನಿಖೆ ಆಗಲಿ ತೊಂದರೆ ಇಲ್ಲ. ನಿಮ್ಮ ಯೋಗ್ಯತೆ ಏನಿದೆ ಅಂತ ಲೋಕಾಯುಕ್ತದಲ್ಲಿ ಇದೆ. ಬಿಜೆಪಿಗೆ ನೈತಿಕತೆ ಇದ್ರೆ ಮುನಿರತ್ನಗೆ ಶಿಕ್ಷೆ ಕೊಡಲಿ ಅಂತ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಮೊದಲ ಬಾರಿಗೆ ಗೌಡ್ತಿಯರ ಕ್ರಿಕೆಟ್ ಪಂದ್ಯಾವಳಿ
ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿಸಿಲ್ಲ ಅಂದ್ರೆ ಕುಸುಮಾ ಆಣೆ-ಪ್ರಮಾಣ ಮಾಡಲಿ ಎಂದಿದ್ದ ಮುನಿರತ್ನಗೆ ಸ್ವತಃ ಸಂತ್ರಸ್ತರೇ ಪ್ರತಿ ಸವಾಲ್ ಹಾಕಿದ್ದಾರೆ. ಇವತ್ತು 7 ಮಂದಿ ಸಂತ್ರಸ್ತರು ಹಾಗೂ ದೂರುದಾರರು ಆದಿ ಚುಂಚನಗಿರಿಗೆ ಆಗಮಿಸಿ ಮುನಿರತ್ನಗೆ ಪಂಥಾಹ್ವಾನ ನೀಡಿದ್ರು. ಈ ಮಧ್ಯೆ, ಮುನಿರತ್ನ ವಿರುದ್ಧದ 4 ಕೇಸ್‌ಗಳ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಸ್ಪೀಕರ್ ಬಳಿ ಎಸ್‌ಐಟಿ ಅನುಮತಿ ಕೇಳಿದೆ. ಚರ್ಚಿಸ್ತೇನೆ ಅಂದಿರೋ ಖಾದರ್. ಪರಿಷತ್‌ನಲ್ಲಿ ಸಿಟಿ ರವಿ ಕೇಸ್ ಅತ್ಯಂತ ದುರಾದೃಷ್ಟಕರ ಅಂದಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸಾಗಿಸ್ತಿದ್ದ ಕ್ಯಾಂಟರ್‌ಗೆ ಲಾರಿ ಡಿಕ್ಕಿಯಾಗಿ ಸ್ಫೋಟ – ಇಬ್ಬರ ಸ್ಥಿತಿ ಗಂಭೀರ