ಬೆಂಗಳೂರು: ಉಪಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಹೊಸಕೋಟೆ ಕ್ಷೇತ್ರ ಮತ್ತೊಂದು ಚುನಾವಣೆಯಲ್ಲಿ ಗಮನಸೆಳೆದಿದ್ದು, ಈ ಬಾರಿ ನಗರಸಭೆಯ ಚುನಾವಣೆಯಲ್ಲೂ ಕಳೆದ ಬಾರಿಯಂತೆ ಸ್ವಾಭಿಮಾನ ಹಾಗೂ ಬಿಜೆಪಿ ನಡುವೆ ಚುನಾವಣೆ ನಡೆದಿದೆ. ಆದರೆ ಈ ಬಾರಿ ಎಂಟಿಬಿ ನಾಗರಾಜು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಸದ್ದು ಮಾಡಿದ್ದ ಕುಕ್ಕರ್, ನಗರಸಭೆ ಚುನಾವಣೆಯಲ್ಲಿ ಅಷ್ಟೇನು ಸದ್ದುಮಾಡಿಲ್ಲ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಇಂದು ಬೆಳಿಗ್ಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ನಗರಸಭೆಯ 31 ಸ್ಥಾನಗಳಲ್ಲಿ 114 ಅಭ್ಯರ್ಥಿಗಳಿದ್ದ 31 ವಾರ್ಡ್ ಗಳಲ್ಲಿ ಬಿಜೆಪಿ 22 ವಾರ್ಡುಗಳಲ್ಲಿ ಗೆಲುವು ಸಾಧಿಸುವ ಮೂಲಕ ನಗರಸಭೆಯನ್ನು ತೆಕ್ಕೆಗೆ ಹಾಕಿಕೊಂಡಿದೆ.
Advertisement
Advertisement
ಈ ಮೂಲಕ ಉಪಚುನಾವಣೆಯಲ್ಲಿನ ಸೇಡನ್ನು ಎಂಟಿಬಿ ತೀರಿಸಿಕೊಂಡಿದ್ದು, ಶಾಸಕ ಶರತ್ ಬಚ್ಚೇಗೌಡ ನಿರೀಕ್ಷಿಸಿದಷ್ಟು ಸ್ಥಾನ ಪಡೆಯದಿರುವುದು ಅವರಿಗೆ ನಿರಾಸೆಯನ್ನುಂಟುಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಒಂದೇ ಒಂದು ಸ್ಥಾನ ಪಡೆಯದೆ ಸೋಲುಂಡಿದೆ.
Advertisement
ಹೊಸಕೋಟೆ ನಗರಸಭೆ 31 ವಾರ್ಡುಗಳ ಚುನಾವಣಾ ಫಲಿತಾಂಶ:
ಹೊಸಕೋಟೆ ನಗರಸಭೆ 31 ವಾರ್ಡುಗಳಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶರತ್ ಬಚ್ಚೇಗೌಡ ಬೆಂಬಲಿಗರು ಏಳು ವಾರ್ಡುಗಳಲ್ಲಿ ಗೆದ್ದಿದ್ದಾರೆ. ಉಳಿದಂತೆ ಎಸ್.ಡಿ.ಪಿ.ಐ ಒಂದು ಮತ್ತು ಪಕ್ಷೇತರರು ಒಂದು ವಾರ್ಡುಗಳಲ್ಲಿ ಗೆಲುವು ಪಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್‍ಗೆ ಈ ಬಾರಿ ಮುಖಭಂಗವಾಗಿದೆ. ಯಾಕೆಂದರೆ 21 ವಾರ್ಡುಗಳಲ್ಲಿ ಒಂದು ವಾರ್ಡಿನಲ್ಲೂ ಕಾಂಗ್ರೆಸ್ ಗೆಲವು ಸಾಧಿಸಿಲ್ಲ.