ಕೊಪ್ಪಳ: ನಗರಸಭೆ ಗುದ್ದುಗೆಗಾಗಿ ಶಾಸಕ ಪರಣ್ಣ ಮುನ್ನವಳ್ಳಿ ಜೆಡಿಎಸ್‍ನ ಇಬ್ಬರು ಸದಸ್ಯರು, ಇಬ್ಬರು ಪಕ್ಷೇತರರನ್ನು ಕರೆದೊಯ್ಯುವ ಮೂಲಕ ಬಿಜೆಪಿ-ಜೆಡಿಎಸ್ ಕೈಜೊಡಿಸಲು ಮುಂದಾಗಿದ್ದಾರೆ.
ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಬಿಜೆಪಿ ಗೇಮ್ ಪ್ಲಾನ್ ಆರಂಭಿಸಿದ್ದು, ಜೆಡಿಎಸ್ ಮುಖಂಡ ಶ್ರೀನಾಥ್ ಕೂಡ ಬಿಜೆಪಿಗೆ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದರು. ಇದನ್ನು ಓದಿ: ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್
Advertisement
Advertisement
ಮೊದಲಿನಿಂದಲೂ ಮನಸ್ತಾಪಗಳು ಇದ್ದ ಕಾರಣ ಕಾಂಗ್ರೆಸ್‍ನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಅಧಿಕಾರದಿಂದ ದೂರವಿಡಲು ಗಂಗಾವತಿಯಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿವೆ. ಒಟ್ಟು 35 ಸ್ಥಾನ ಹೊಂದಿದ್ದ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 17, ಬಿಜೆಪಿ 14, ಪಕ್ಷೇತರ 2, ಜೆಡಿಎಸ್ 2 ಅಭ್ಯರ್ಥಿಗಳು ಆಯ್ಕೆಯಾಗಿದ್ರು. ಮ್ಯಾಜಿಕ್ ನಂ 18 ಕ್ಕೇರಲು ಬಿಜೆಪಿ ಕಸರತ್ತು ನಡೆಸುತ್ತಿದೆ ಎಂದು ತಿಳಿಸಿದರು.
Advertisement
Advertisement
ನಿನ್ನೆ ಲೋಕಲ್ ದೋಸ್ತಿ ಮಾಡನಾಡಿದ ಅವರು ಸಿಎಂ ಕುಮಾರಸ್ವಾಮಿ ಅವರು ರಾಜ್ಯ ಮಟ್ಟದ ಬಳಿಕ ಲೋಕಲ್‍ನಲ್ಲೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯವಾಗಲಿದೆ. ಆದರೆ ಕೊಪ್ಪಳದ ಲೋಕಲ್‍ನಲ್ಲಿ ಮಾತ್ರ ಸಿಎಂ ಮಾತಿಗೆ ಕಿಮ್ಮತ್ತಿಲ್ಲ. ಗಂಗಾವತಿ ನಗರಸಭೆಯಲ್ಲಿ ಅತಿದೊಡ್ಡ ಪಕ್ಷವಾದರೂ ಕಾಂಗ್ರೆಸ್‍ಗೆ ಇಲ್ಲ ಗದ್ದುಗೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict