ಗಾಂಧಿನಗರ: ರಾಜ್‍ಕೋಟ್‍ನ (Rajkot) ಗೇಮಿಂಗ್ ಝೋನ್‌ನಲ್ಲಿ (TRP Game Zone) ಕಳೆದ ತಿಂಗಳು ಸಂಭವಿಸಿದ ಅಗ್ನಿ ದುರಂತ ಕುರಿತು ಇಂದು (ಜೂ.13) ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Gujarat High Court), ಮುನ್ಸಿಪಲ್ ಕಮಿಷನರ್ ನಿದ್ರಿಸುತ್ತಿದ್ದಾರೆ ಎಂದು ಚಾಟಿ ಬೀಸಿದೆ. ಅಗ್ನಿ ಅವಘಡಕ್ಕೆ ಗುತ್ತಿಗೆದಾರರನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೇಳಿದ ಅಧಿಕಾರಿಗಳ ವಿರುದ್ಧವೂ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿದೆ. ಈ ವೇಳೆ ರಾಜ್‍ಕೋಟ್ ಅಗ್ನಿ ಅವಘಡ ನಿಮಗೆ ಚಿಕ್ಕದೆನಿಸುತ್ತಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಸಮಯಕ್ಕೆ ಸರಿಯಾಗಿ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿತು.
Advertisement
Advertisement
ಮೊರ್ಬಿ, ಹರ್ನಿ ಸೇರಿದಂತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಪಾಲಿಕೆ ಆಯುಕ್ತರು ನಿದ್ದೆ ಮಾಡುತ್ತಿದ್ದಾರೆ. ಹೀಗಾಗಿ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸುತ್ತಿವೆ. ಈಗ ಯಾವುದೇ ಪೌರಾಯುಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ.
Advertisement
ಮೇ 25 ರಂದು ರಾಜ್‍ಕೋಟ್‍ನ ಟಿಆರ್‍ಪಿ ಗೇಮಿಂಗ್ ಝೋನ್‍ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮಕ್ಕಳು ಸೇರಿದಂತೆ 28 ಜನ ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ, ಅಗ್ನಿಶಾಮಕ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿತ್ತು. ಅಲ್ಲದೇ ರಾಜ್‍ಕೋಟ್‍ನಲ್ಲಿ ಎರಡು ಇತರ ಗೇಮಿಂಗ್ ಝೋನ್‍ಗಳು ಅಗ್ನಿ ಸುರಕ್ಷತೆ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಪರವಾನಗಿ ಇಲ್ಲದೆ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂಬ ವಿಚಾರವಾಗಿ ಹೈಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
Advertisement
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಗ್ನಿ ಸುರಕ್ಷತಾ ಕಾಯಿದೆಯನ್ನು ರಾಜ್ಯದಲ್ಲಿ ಅನುಸರಿಸುತ್ತಿಲ್ಲ ಎಂಬ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ತನಿಖೆಯಲ್ಲಿ ಲೋಪ ಎಸಗಲಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.
ರಾಜ್‍ಕೋಟ್ ಅಗ್ನಿ ದುರಂತದ ನಂತರ, ಗುಜರಾತ್ ಸರ್ಕಾರವು ಮನರಂಜನಾ ಸೌಲಭ್ಯಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕರಡು ನಿಯಮಗಳನ್ನು ರೂಪಿಸಿದೆ.