– ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರ ಎಚ್ಚರಿಕೆ
ಬೆಂಗಳೂರು: ರಾಜ್ಯಕ್ಕೆ ಕೊನೆಗೂ ತಡವಾಗಿ ಎಂಟ್ರಿ ಕೊಟ್ಟ ಮುಂಗಾರು ರೈತರ ಕಣ್ಣಲ್ಲಿ ಆಶಾಕಿರಣ ಮೂಡಿಸಿದೆ. ಆದರೆ, ಮುಂಗಾರು ಎಂಟ್ರಿಯ ಬೆನ್ನಲ್ಲೇ ರಾಜ್ಯಕ್ಕೆ ಶಾಕಿಂಗ್ ಸಿಕ್ಕಿದೆ. ಮುಂಗಾರು ಮಳೆಯಿಂದಾಗಿ ಕೊಡಗು ದುರಂತ ಮರುಕಳಿಸುವ ಮಹಾ ಮುನ್ಸೂಚನೆ ಸಿಕ್ಕಿದೆ.
Advertisement
ಭರ್ತಿ 14 ದಿನ ತಡವಾಗಿ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ. ಕರಾವಳಿ, ಕೊಡಗು ಮೈಸೂರು ಮೂಲಕ ರಾಜ್ಯಕ್ಕೆ ಶುಕ್ರವಾರ ಎಂಟ್ರಿಯಾಗಿರುವ ಮುಂಗಾರು ರೈತರಲ್ಲಿ ಕೊಂಚ ನಗು ಮೂಡಿಸಿದೆ. ಆದರೆ ಆತಂಕದ ವಿಚಾರ ಅಂದರೆ ಕೊಡಗಿನಲ್ಲಿ ಕಳೆದ ವರ್ಷದ ದುರಂತ ಮರುಕಳಿಸುತ್ತಾ ಎನ್ನುವ ಅನುಮಾನ ಹುಟ್ಟಿದೆ. ಯಾಕೆಂದರೆ ಹವಾಮಾನ ಇಲಾಖೆಯ ಪ್ರಕಾರ ಜು. 20ರ ನಂತರ ಎರಡು ವಾರಗಳ ಕಾಲ ಕೊಡಗಿನಲ್ಲಿ ಸತತ ಮಹಾ ಮಳೆಯಾಗಲಿದೆ. ಅಲ್ಲದೆ ಈಗಾಗಲೇ ಭೂಗರ್ಭ ತಜ್ಞರು ಕೂಡ ಕೊಡಗಿನಲ್ಲಿ ಈ ವರ್ಷವೂ ಭೂ ಕುಸಿತ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೊಡಗಿನಲ್ಲಿ ಜಿಲ್ಲಾಡಳಿತ ಹೆಲ್ತ್ ಲೈನ್ ನಂಬರ್ ಕೂಡ ಜನರಿಗೆ ನೀಡುತ್ತಿದೆ.
Advertisement
Advertisement
ವಾಯು ಚಂಡಮಾರುತದಿಂದ ಮುಂಗಾರು ಈ ವಾರ ಕೊಂಚ ದುರ್ಬಲವಾಗಲಿದ್ದು, ಮುಂದಿನ ನಾಲ್ಕೈದು ದಿನದ ಬಳಿಕ ಚುರುಕುಗೊಂಡು ರಾಜ್ಯಾದ್ಯಂತ ವ್ಯಾಪಿಸಲಿದೆ. ಮುಂದಿನ ವಾರದಿಂದ ಬೆಂಗಳೂರಿನಲ್ಲೂ ಮುಂಗಾರು ಮಳೆ ಶುರುವಾಗಲಿದೆ. ಕರುನಾಡಿನ ಜನ ಕಾಯುತ್ತಿದ್ದ ಮುಂಗಾರು ಎಂಟ್ರಿಯೇನೋ ಕೊಟ್ಟಿದೆ. ಆದರೆ ಈಗ ಮುಂಗಾರು ಸೃಷ್ಟಿಸುವ ಅವಾಂತರದ ಬಗ್ಗೆ ಜನ ಗಾಬರಿಯಾಗಿದ್ದಾರೆ.