ಗದಗ: ರಾತ್ರೋ ರಾತ್ರಿ ಮರಳನ್ನ ಬೇರೆಯಡೆ ಸಾಗಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದ ತಹಶೀಲ್ದಾರ್ ಗೆ ಸಾರ್ವಜನಿಕರೇ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂಡರಗಿ ತಾಲೂಕಿನ ದಂಡಾಧಿಕಾರಿ ಬ್ರಮರಾಂಭ ಗುಬ್ಬಿಶೆಟ್ಟಿ ಮಹಿಳಾ ಅಧಿಕಾರಿ ನಾಗರಹಳ್ಳಿ ಗ್ರಾಮದಲ್ಲಿ ರಾತ್ರೋ ರಾತ್ರಿ ಜೆಸಿಬಿ ಮೂಲಕ ಟಿಪ್ಪರ್ ಗೆ ಮರಳು ಲೋಡ್ ಮಾಡಿಸುತ್ತಿದ್ದರು. ಬಡವರ ಶೌಚಾಲಯ ಹಾಗೂ ಸರ್ಕಾರದಿಂದ ಮಂಜೂರಾದ ಮನೆಗಳನ್ನ ಕಟ್ಟಲು ಅಲ್ಪ-ಸ್ವಲ್ಪ ಹಾಕಿಕೊಂಡ ಮರಳನ್ನ ಸಾಗಿಸುವ ವೇಳೆ ತಹಶೀಲ್ದಾರ್ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಸಾರ್ವಜನಿಕರು ಏನು ಮೇಡಂ ಇದು ಅನ್ಯಾಯ ಎಂದು ಕೇಳಿದ್ರೆ, ಏ.. ನೀನ್ಯಾರು ನನ್ನ ಕೇಳೋಕೆ. ನಾನು ರೇಡ್ ಗೆ ಬಂದಿದ್ದೇನೆ ಎಂದು ದರ್ಪದಿಂದ ಹೇಳಿದ್ದಾರೆ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಸಾರ್ವಜನಿಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಲ್ಲ, ಪೊಲೀಸ್ ಅಧಿಕಾರಿಗಳಿಲ್ಲ, ನೀವು ಒಬ್ಬರೆ ಅದು ರಾತ್ರಿ ಸಮಯದಲ್ಲಿ ಏಕೆ ಬಂದ್ರಿ ಮೇಡಂ ಎಂದಿದ್ದಾರೆ. ಆದರೆ ಅವರು ಜಾಸ್ತಿ ಪ್ರಶ್ನೆ ಕೇಳಿದ್ರೆ ಅರೆಸ್ಟ್ ಮಾಡಿಸುತ್ತೇನೆ ಎಂದು ತಹಶೀಲ್ದಾರ್ ಮೇಡಂ ದರ್ಪ ತೋರಿದ್ದಾರೆ. ರಾತ್ರಿಯಾಗಲಿ ಹಗಲಿನಲ್ಲಾಗಲಿ ಜನರು ಕೇಳಿದಾಗ ರೇಡ್ ಅಂತಾರೆ, ಕೇಳದೆ ಸುಮ್ಮನಿದ್ರೆ ಅದನ್ನ ಬೆರೆಕಡೆಗೆ ಮಾರಿಕೊಳ್ಳುತ್ತಾರೆ. ಸ್ವತ: ಅಧಿಕಾರಿಗಳೇ ಮುಂದೆ ನಿಂದು ಟಿಪ್ಪರ್ ಲೋಡ್ ಮಾಡಿ ಮರಳು ಸಾಗಿಸುವ ಮೂಲಕ ದುಡ್ಡು ಮಾಡಿಕೊಳ್ಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
ಬಯಲು ಮುಕ್ತ ಶೌಚ ರಾಜ್ಯ ಮಾಡಬೇಕು, ಸೂರು ಇಲ್ಲದವರಿಗೆ ಸೂರು ಕಲ್ಪಿಸಬೇಕು ಎಂದು ಸರ್ಕಾರ ಬಜೆಟ್ ನಲ್ಲಿ ಕೋಟ್ಯಾಂತರ ರೂ. ಹಣವನ್ನು ಮೀಸಲಿರಿಸುತ್ತದೆ. ಶೌಚಾಲಯ ಹಾಗೂ ಸರ್ಕಾರದಿಂದ ಮಂಜೂರಾದ ಮನೆ ನಿರ್ಮಿಸಲು ಬಡವರು ಅಲ್ಪಸ್ವಲ್ಪ ಸಂಗ್ರಹಿಸಿದ ಮರಳಿಗೂ ತಹಶೀಲ್ದಾರ್ ಕನ್ನ ಹಾಕಿ ರೇಡ್ ನೆಪದಲ್ಲಿ ಮಾರಿಕೊಳ್ಳುತ್ತಾರೆ. ಸಮಸ್ಯೆಗಳನ್ನ ಹೊತ್ತು ಕಚೇರಿಗೆ ಹೊದರೆ ಸರಿಯಾಗಿ ಕಚೇರಿಯಲ್ಲಿ ಇರಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ರಾತಿ, ಹಗಲು ಒಬ್ಬರೆ ಎಲ್ಲಂದರಲ್ಲಿ ನುಗ್ಗಿ ವಸೂಲಿಗೆ ಇಳಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಹಶೀಲ್ದಾರ್ ಮೇಡಂ ಮಾಡಿದ ಕೆಲಸಕ್ಕೆ ನಾಗರಹಳ್ಳಿ ಸಾರ್ವಜನಿಕರು ದಿಗ್ಬಂಧನ ಹಾಕಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ರಾತ್ರಿ ಇಡೀ ಜಾಗರಣೆ ಮಾಡಿಸಿದ್ದಾರೆ. ನಂತರ ಮುಂಡರಗಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಬ್ರಮರಾಂಭ ಅವರನ್ನ ರಕ್ಷಣೆ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.