ಮಂಗಳೂರು: ಮ್ಯಾನ್ ಹೋಲ್ ಕ್ಲೀನಿಂಗ್‍ಗಾಗಿ ಪೌರ ಕಾರ್ಮಿಕರನ್ನು ಹೊಂಡಕ್ಕೆ ಇಳಿಸಿ ಕೆಲಸ ಮಾಡಿಸಬಾರದೆಂದಿದ್ದರೂ ಆಡಳಿತ ವರ್ಗ ಮಾತ್ರ ಅಸಡ್ಡೆ ವಹಿಸುತ್ತಿದೆ.
ಮಂಗಳೂರಿನ ನಗರ ಪ್ರದೇಶದ ಹಳೆ ಬಂದರಿನಲ್ಲಿ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛ ಮಾಡಿಸಿದ ಘಟನೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮ್ಯಾನ್ ಹೋಲ್ ಕ್ಲೀನಿಂಗ್ ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ಈ ಕೆಲಸ ಮಾಡಿಸಿದ್ದಾನೆ. ವಿಶೇಷ ಅಂದ್ರೆ ಅತೀ ಹೆಚ್ಚು ಜನದಟ್ಟಣೆ ಇರುವ ಪ್ರದೇಶದಲ್ಲಿಯೇ ಹೀಗೆ ಪೌರ ಕಾರ್ಮಿಕರನ್ನು ದುಡಿಸಿಕೊಳ್ಳಲಾಗಿದೆ.
Advertisement
ನಿಯಮದ ಪ್ರಕಾರ, ಯಾವುದೇ ಕಾರಣಕ್ಕೂ ಮ್ಯಾನ್ ಹೋಲ್ ಕ್ಲೀನಿಂಗ್ ಕೆಲಸಕ್ಕೆ ಕಾರ್ಮಿಕರನ್ನು ಬಳಸಬಾರದು. ಯಂತ್ರಗಳ ಮೂಲಕ ಮಾತ್ರ ಈ ಕೆಲಸ ಮಾಡಬೇಕಿದೆ. ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕ ಹಿಂದೊಮ್ಮೆ ಸಾವನ್ನಪ್ಪಿದ ಬಳಿಕ ಈ ಕಾನೂನನ್ನು ಕಟ್ಟುನಿಟ್ಟು ಮಾಡಲಾಗಿತ್ತು. ಆದರೆ ಈ ನಿಯಮವನ್ನು ನಗರ ಪ್ರದೇಶದಲ್ಲಿಯೇ ಗಾಳಿಗೆ ತೂರಲಾಗಿದೆ. ಉತ್ತರ ಕರ್ನಾಟಕ ಮೂಲದ ಕಾರ್ಮಿಕರನ್ನು ಹೊಂಡಕ್ಕೆ ಇಳಿಸಿ ರಾಜಾರೋಷವಾಗಿ ಕೆಲಸ ಮಾಡಿಸಲಾಗಿದೆ.