ಕೊಪ್ಪಳ: ನಗರದಲ್ಲಿ ಕಳೆದ ಹತ್ತು ದಿನಗಳಿಂದ್ಲೂ ಹನಿ ನೀರಿಗೂ ಜನರು ಪರದಾಡ್ತಿದ್ದಾರೆ. ಗಂಗಾವತಿ ನಗರದಲ್ಲಿ ಮದ್ಯ ಮಾತ್ರ ಸಲೀಸಾಗಿ ಸಿಗುತ್ತೆ. ಆದ್ರೆ ಕುಡಿಯೋಕೆ ನೀರು ಮಾತ್ರ ಸಿಗ್ತಿಲ್ಲ. ಇಲ್ಲಿನ ನಗರಸಭೆ ಸದಸ್ಯರು ಶಾಸಕ ಇಕ್ಬಾಲ್ ಅನ್ಸಾರಿ ಜನ್ಮದಿನದಂದು ಕುಣಿದು ಕುಪ್ಪಳಿಸಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Advertisement
ಗಂಗಾವತಿ ತಾಲೂಕಿನ ಶಾಸಕರಾದ ಇಕ್ಬಾಲ್ ಅನ್ಸಾರಿಯವರ ಹುಟ್ಟು ಹಬ್ಬದಂದು ನಗರಸಭೆ ಸದಸ್ಯರು ಸೇರಿದಂತೆ ಬೆಂಬಲಿಗರು ಕುಡಿದು ಕುಪ್ಪಳಿಸಿದ್ದಾರೆ. ಟಿಬಿ ಡ್ಯಾಂ ಡೆಡ್ ಸ್ಟೋರೇಜ್ ತಲುಪಿದೆ. ಗಂಗಾವತಿ ಜನರು ಹನಿ ನೀರಿಗಾಗಿ ಪರದಾಡ್ತಿದ್ದಾರೆ. ಖಾಲಿ ಕೊಡ ಹಿಡಿದು ಪ್ರತಿಭಟನೆಗೆ ಇಳಿದಿದ್ದು, ನಮಗೆ ಎಣ್ಣೆ ಬೇಡ ಸ್ವಾಮಿ ನೀರು ಕೊಡಿ ಅಂತಿದ್ದಾರೆ.
Advertisement
Advertisement
ಜನರು ನೀರಿಗಾಗಿ ಮೈಲುಗಟ್ಟಲೇ ಅಲೆದಾಡ್ತಾಯಿದ್ದಾರೆ. ಆದ್ರೆ ಇದ್ಯಾವುದರ ಚಿಂತೆಯಿಲ್ಲದ ಜನಪ್ರತಿನಿಧಿಗಳು ಮಾತ್ರ ಸಾರ್ವಜನಿಕವಾಗಿ ಮೋಜು ಮಸ್ತಿಯಲ್ಲಿ ತೊಡಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.