Connect with us

ಕಾಂಗ್ರೆಸ್ ಮುಖಂಡನಿಂದ ನಗರಸಭೆ ಅಧಿಕಾರಿ ಮೇಲೆ ಹಲ್ಲೆ

ಕಾಂಗ್ರೆಸ್ ಮುಖಂಡನಿಂದ ನಗರಸಭೆ ಅಧಿಕಾರಿ ಮೇಲೆ ಹಲ್ಲೆ

ರಾಯಚೂರು: ನಗರಸಭೆ ಸದಸ್ಯೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅಡ್ಡಿಪಡಿಸಿ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರಸಭೆ ಸದಸ್ಯೆ ಎಂ.ಕೆ.ಕಮಲಬೀ ಅವರ ಪತಿ ಎಂ.ಕೆ.ಬಾಬರ್ ಹಲ್ಲೆ ಮಾಡಿರುವ ವ್ಯಕ್ತಿ. ಕೊಳಚೆ ನೀರು ಶುದ್ಧೀಕರಣ ಘಟಕದ ಯೋಜನಾ ಅಧಿಕಾರಿ ಚಂದ್ರಶೇಖರ ಹಲ್ಲೆಗೊಳಗಾಗಿದ್ದಾರೆ. ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಬಳಿ ಮಾತಿನ ಚಕಮಕಿ ನಡೆಸಿ, ಬಾಬರ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ.

ಮುಖಕ್ಕೆ ಹೊಡೆದಿದ್ದರಿಂದ ಚಂದ್ರಶೇಖರ ಅವರಿಗೆ ಗಾಯಗಳಾಗಿವೆ. ಈ ಬಗ್ಗೆ ಸದರ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಬರ್ ರನ್ನ ಬಂಧಿಸಲಾಗಿದ್ದು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಂದ್ರಶೇಖರ

ಎಂ.ಕೆ.ಬಾಬರ್

Advertisement
Advertisement