– ಕ್ಷಮೆ ಕೇಳಿದ ಸಿಬ್ಬಂದಿ
ಕ್ಯಾನ್ಬೆರಾ: ರೆಸ್ಟೋರೆಂಟ್ ನಲ್ಲಿ ಬಳಕೆಯಾದ ಕಾಂಡೋಮ್ ಸಿಕ್ಕಿದ್ದಕ್ಕೆ ಮ್ಯಾಕ್ ಡೋನಲ್ಡ್ ಸಿಬ್ಬಂದಿ ಗ್ರಾಹಕರ ಕ್ಷಮೆ ಕೇಳಿದೆ.
ಏನಿದು ಘಟನೆ?
ಮಹಿಳೆ ತನ್ನ ಮಗು ಹಾಗೂ ಪತಿ ಜೊತೆ ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಮ್ಯಾಕ್ ಡೋನಲ್ಡ್ ಗೆ ಬಂದಿದ್ದರು. ಈ ವೇಳೆ ಅಲ್ಲಿ ಬಿದ್ದಿದ್ದ ಬಳಕೆಯಾದ ಕಾಂಡೋಮ್ ಮಗು ಬಾಯಲ್ಲಿ ಹಾಕಿಕೊಂಡಿತ್ತು. ಮಗುವಿನ ಬಾಯಲ್ಲಿ ಕಾಂಡೋಮ್ ನೋಡಿದ ಪೋಷಕರು ಕೂಡಲೇ ಸಿಬ್ಬಂದಿಗೆ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿದ ಬಳಿಕ ಮ್ಯಾಕ್ ಡೋನಲ್ಡ್ ಸಿಬ್ಬಂದಿ ಗ್ರಾಹಕರಲ್ಲಿ ಕ್ಷಮೆ ಕೇಳಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಮಗುನಿನ ತಾಯಿ ವೆಂಡಿ, ನಾನು ಕೌಂಟರ್ ನಲ್ಲಿ ನಿಂತಾಗ ಮಗು ತಂದೆಯ ಜೊತೆಯಲ್ಲಿತ್ತು. ಕೌಂಟರ್ ನಿಂದ ಮಗುವಿನ ಬಳಿ ಹೋದಾಗ ಅದು ಬಾಯಲ್ಲಿ ಕಪ್ಪು ಬಣ್ಣದ ಕಾಂಡೋಮ್ ಹಾಕಿಕೊಂಡಿತ್ತು. ಕೂಡಲೇ ನಾನು ಬಾತ್ ರೂಂಗೆ ಮಗುವನ್ನು ಕರೆದುಕೊಂಡು ಹೋಗಿ ಬಾಯಿಯನ್ನು ಸ್ವಚ್ಛಗೊಳಿಸಿ ನೀರು ಕುಡಿಸಿದೆ. ಕೊನೆಗೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ತಪಾಸಣೆಗೆ ಒಳಪಡಿಸಲಾಯ್ತು. ವೈದ್ಯರು ಮಗು ಬಾಯಲ್ಲಿ ಹಾಕಿಕೊಂಡಿರುವ ಕಾಂಡೋಮ್ ನ್ನು ಲ್ಯಾಬ್ ಗೆ ಕಳುಹಿಸಿದ್ರೆ ಎಲ್ಲ ಅನುಮಾನಗಳು ದೂರವಾಗುತ್ತದೆ ಎಂದು ಹೇಳಿದರು.
Advertisement
ವೈದ್ಯರ ಸಲಹೆಯ ಮೇರೆ ಮ್ಯಾಕ್ ಡೋನಲ್ಡ್ ಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ತಮ್ಮ ತಪ್ಪನ್ನು ಮರೆ ಮಾಚಲು ಪ್ರಯತ್ನಿಸಿದರು. ಕೊನೆಗೆ ಕ್ಷಮೆ ಕೇಳಿದರು. ಇದೀಗ ಮಗುವಿನ ರಕ್ತದ ಮಾದರಿಯನ್ನು ಲ್ಯಾಬ್ ಗೆ ನೀಡಿದ್ದೇವೆ. ಬ್ಲಡ್ ರಿಪೋರ್ಟ್ ಗಾಗಿ ಮೂರು ತಿಂಗಳು ಕಾಯಬೇಕಿದೆ ಎಂದು ವೆಂಡಿ ಹೇಳಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಕ್ ಡೋನಲ್ಡ್ ಕಂಪನಿಯ ವಕ್ತಾರ, ನಾವು ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ. ನಿರ್ಲಕ್ಷ್ಯವಹಿಸಿದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ಈ ರೀತಿಯ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು. ರೆಸ್ಟೋರೆಂಟ್ ಸ್ವಚ್ಛತೆಯ ಗಮನ ನೀಡುವುದಕ್ಕಾಗಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.