– ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಕೆಂಡ
ಮುಂಬೈ: ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆವೃತ್ತಿಯಲ್ಲಿ ಆಗಾಗ್ಗೆ ವಿವಾದಗಳು ನಡೆಯುತ್ತಿರುತ್ತವೆ. ಆದರೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ (WPL 2023) ಈಗ ನೋಬಾಲ್ ವಿವಾದ ಹುಟ್ಟಿಕೊಂಡಿದೆ.
No ball or fair delivery? ????
— Delhi Capitals (@DelhiCapitals) March 26, 2023
Advertisement
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ಫೈನಲ್ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಉಭಯ ತಂಡಗಳ ನಡುವಿನ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಇದನ್ನೂ ಓದಿ: ರೋಚಕ ಫೈನಲ್ – ಮುಂಬೈ ಇಂಡಿಯನ್ಸ್ ಚೊಚ್ಚಲ WPL ಚಾಂಪಿಯನ್
Advertisement
Advertisement
ಮುಂಬೈ ಇಂಡಿಯನ್ಸ್ ತಂಡವು ತನ್ನ ಶಿಸ್ತಿನ ಬೌಲಿಂಗ್ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 131 ರನ್‌ಗಳಿಗೆ ಕಟ್ಟಿಹಾಕಿತ್ತು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದನ್ನೂ ಓದಿ: WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ
Advertisement
6⃣,4⃣ and OUT!
Talk about a dramatic start in the #Final ????????
Follow the match ▶️ https://t.co/N0U4wKUU0z#TATAWPL | #DCvMI pic.twitter.com/iMLHWvmJMW
— Women’s Premier League (WPL) (@wplt20) March 26, 2023
ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದ ಬಳಿಕ ವಿವಾದವೊಂದು ಹುಟ್ಟಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಶಫಾಲಿ ವರ್ಮಾ (Shafali Verma) ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ಬೌಲರ್ ಇಸ್ಸಿ ವಾಂಗ್ 2ನೇ ಓವರ್‌ನಲ್ಲಿ ಎಸೆದ 3ನೇ ಎಸೆತವು ಹೈ-ಫುಲ್‌ಟಾಸ್ ಆಗಿತ್ತು. ಸೊಂಟದ ಮೇಲ್ಭಾಗದಲ್ಲಿದ್ದರೂ ಶಫಾಲಿ ವರ್ಮಾಗೆ ಔಟ್ ತೀರ್ಪು ನೀಡಲಾಯಿತು. ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿದ್ದ ಶಫಾಲಿ ವರ್ಮಾ ಔಟ್ ಅನ್ನು ಕ್ಯಾಪ್ಟನ್ ಮೆಗ್ ಲ್ಯಾನಿಂಗ್ (Meg Lanning) ಪ್ರಶ್ನಿಸಿದರು. ಇದರ ಹೊರತಾಗಿಯೂ ಔಟ್ ನೀಡಲಾಯಿತು. ಇದರಿಂದ ಡೆಲ್ಲಿ ತಂಡವು ಬೃಹತ್ ಮೊತ್ತ ಸಿಡಿಸುವಲ್ಲಿ ವಿಫಲವಾಯಿತು ಎನ್ನಲಾಗುತ್ತಿದೆ.
A thread exposing Chumbai Indians W
Delhi decided to bat first after winning the toss where most of the teams would have decided to chase first
Starting with the first wicket of Shafali Verma who was looking in good form but wronged by the umpire as a clean no ball was denied pic.twitter.com/QumU9OWM2h
— Jash (@JashPat02803650) March 26, 2023
ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನದ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತು. ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಶಫಾಲಿ ವರ್ಮಾ ಔಟ್ ತಂಡಕ್ಕೆ ಭಾರೀ ಆಘಾತ ನೀಡಿತು. ಅಂತಿಮವಾಗಿ ಮುಂಬೈ ಚಾಂಪಿಯನ್ ಪಟ್ಟಕೇರಿತು.
2022ರ ಪುರುಷರ ಐಪಿಎಲ್ ಪಂದ್ಯದ ವೇಳೆ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ಇದೇ ರೀತಿ ನೋಬಾಲ್ ವಿವಾದ ಉಂಟಾಗಿತ್ತು. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?