– ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ನೀರು
ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈಗೆ (Mumbai) ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ ಭಾರೀ ಮಳೆಗೆ ನೂತನ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ(Acharya Atre Chowk underground Metro Station) ಆಕ್ವಾಲೈನ್-3 ಸಂಪೂರ್ಣ ಜಲಾವೃತವಾಗಿದೆ.
ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್ ಮಳೆ ನೀರಿನಿಂದ ತುಂಬಿದ್ದು, ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ನೀರು ಹರಿದು ಬಂದಿದೆ. ಇದನ್ನೂ ಓದಿ: ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು
ಮುಂಬೈ ಆಕ್ವಾಲೈನ್ 3 (Aqua Line 3) ಸೇವಾ ನವೀಕರಣ ಹಾಗೂ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದಾಗಿ, ಆಕ್ವಾಲೈನ್ -3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಆಚಾರ್ಯ ಅತ್ರೆ ಚೌಕ್ ಬದಲಿಗೆ ವರ್ಲಿ ನಿಲ್ದಾಣದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್ (MMRCL) ಅಧಿಕೃತ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಇದನ್ನೂ ಓದಿ: ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು
ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಎಂಆರ್‌ಸಿಎಲ್ ತಿಳಿಸಿದೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್
ಮುಂಬೈನಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ, ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಪ್ರವೇಶ/ನಿರ್ಗಮನ ಸ್ಟೆಪ್ ಹಾಗೂ ಎಸ್ಕಲೇಟರ್‌ಗಳ ಮೂಲಕ ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹಠಾತ್ ನೀರು ಹರಿದು ಬಂದ ಕಾರಣ ಪ್ರವೇಶ/ನಿರ್ಗಮನ ಮಾರ್ಗದಲ್ಲಿನ ಆರ್‌ಸಿಸಿ ನೀರು ತಡೆಗೋಡೆ ಕುಸಿದು ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ
ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಅವಧಿಪೂರ್ವ ಮುಂಗಾರು ಪ್ರವೇಶಿಸಿದೆ..