ಮುಂಬೈ: ದೀಪಾವಳಿ ( Diwali) ಹಬ್ಬದ ಹಿನ್ನೆಲೆ ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿ 49 ವರ್ಷದ ಮಹಿಳೆ 2.8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
Advertisement
ಮುಂಬೈ (Mumbai) ಉಪನಗರ ಅಂಧೇರಿ (Andheri) ನಿವಾಸಿಯಾಗಿರುವ ಪೂಜಾ ಶಾ ಅವರು, ಭಾನುವಾರ ಫುಡ್ ಅಪ್ಲಿಕೇಶನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಿ ಆನ್‍ಲೈನ್‍ನಲ್ಲಿ 1,000 ರೂಪಾಯಿ ಪಾವತಿಸಲು ಪ್ರಯತ್ನಿಸಿದರು, ಆದರೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ವೀಟ್ ಅಂಗಡಿಯವರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದರು. ಈ ವೇಳೆ ವ್ಯಕ್ತಿ ಪೂಜಾ ಅವರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಓಟಿಪಿ ನಂಬರ್ ನೀಡುವಂತೆ ಕೇಳಿದ್ದಾನೆ. ಇದನ್ನೂ ಓದಿ: ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕೋತಿಗಳ ಕಾಟ- ಕೈಯಲ್ಲಿರೋ ಬ್ಯಾಗನ್ನೂ ಬಿಡದೇ ಚೆಲ್ಲಾಟ
Advertisement
Advertisement
ಮಹಿಳೆ ಕೂಡ ತಮ್ಮ ಕಾರ್ಡ್ ವಿವರಗಳು ಹಾಗೂ ಓಟಿಪಿಯನ್ನು ಹಂಚಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಹಿಳೆ ಖಾತೆಯಿಂದ 2,40,310 ರೂಪಾಯಿ ಹಣ ಕಟ್ ಆಗಿದೆ. ಬಳಿಕ ಈ ಸಂಬಂಧ ಮಹಿಳೆ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ 2,27,205 ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗುತ್ತಿರುವುದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆ ತಮ್ಮ ಹಣವನ್ನು ಮರು ಪಡೆದುಕೊಂಡಿದ್ದಾರೆ. ಸದ್ಯ ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ದೀಪಾವಳಿ ಸಂಭ್ರಮ- ಎಲ್ಲರನ್ನೂ ಆಕರ್ಷಿಸಿದ ಗೂಡುದೀಪದ ಕಾರ್ಯಕ್ರಮ