ಮುಂಬೈ: ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ (JSW Group MD) ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ (Sajjan Jindal) ತಮ್ಮ ಮೇಲಿನ ಅತ್ಯಾಚಾರದ ಆರೋಪವನ್ನು ನಿರಾಕರಿಸಿದ್ದಾರೆ.
ತಮ್ಮ ಆರೋಪದ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಂದಾಲ್, ತಮ್ಮ ತಮ್ಮ ಮೇಲಿನ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ. ತನಿಖೆಗೆ ಸಂಪೂರ್ಣ ಸಹಕೃ ನೀಡಲು ಬದ್ಧನಾಗಿದ್ದೇನೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಕುಟುಂಬದ ಖಾಸಗಿತನವನ್ನು ಗೌರವಿಸಲು ನಾವು ವಿನಂತಿಸುತ್ತೇವೆ ಎಂದಿದ್ದಾರೆ.
Advertisement
Advertisement
ಮಹಿಳೆಯ ದೂರಿನಲ್ಲೆ ಏನಿದೆ..?: 2022ರ ಜನವರಿ 24ರಂದು ಜಿಂದಾಲ್‌ನ ಬಿಕೆಸಿ ಆವರಣದಲ್ಲಿರುವ ಪೆಂಟ್‌ಹೌಸ್‌ನಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎಂದು ಆರೋಪಿಸಿ 30 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್
Advertisement
ದೂರಿನಲ್ಲಿ, ಮೊದಲ ಬಾರಿಗೆ ಸಜ್ಜನ್ ಜಿಂದಾಲ್ ಅವರನ್ನು 2021ರ ಅಕ್ಟೋಬರ್ 8 ರಂದು ದುಬೈನಲ್ಲಿ ಭೇಟಿಯಾದರು. ಆಸ್ತಿ ಸಂಬಂಧಿತ ಮಾತುಕತೆಗಳನ್ನು ಮುಂದುವರಿಸುವ ಸಲುವಾಗಿ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಮದುವೆಯಾಗುವುದಾಗಿಯೂ ನಂಬಿಸಿ ನನ್ನೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಸಜ್ಜನ್ ಜಿಂದಾಲ್ ಮೇಲೆ IPC 376 (ಅತ್ಯಾಚಾರ), IPC 354 (ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ಮೇಲೆ ಬಲಾತ್ಕಾರ ಮಾಡುವ ಉದ್ದೇಶ), ಮತ್ತು IPC 503 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.