ಮುಂಬೈ: ಗಂಡು ಮಗುವಿಗಾಗಿ ಪತಿ ಮತ್ತು ಅತ್ತೆ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಮಗಳನ್ನು ನೀರಿನ ತೊಟ್ಟಿನಲ್ಲಿ ಮುಳುಗಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಧ್ಯ ಮುಂಬೈನ ಕಲಾಚೌಕಿ ಪ್ರದೇಶದ ಸಂಘರ್ಷ ಸದನ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ತನ್ನ ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಮನೆಗೆ ಬಂದು ಅಪಹರಿಸಿದ್ದಾರೆ ಎಂದು 36 ವರ್ಷದ ಮಗುವಿನ ತಾಯಿಯು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು.
ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣದ ಎಫ್‌ಐಆರ್ ದಾಖಲಿಸಿದ್ದರು. ಅಷ್ಟೇ ಅಲ್ಲದೇ ಆರೋಪಿ ತಾಯಿಯು ಅಪಹರಣ ಮಾಡಿದ್ದ ಮಹಿಳೆಯ ರೇಖಾಚಿತ್ರವನ್ನು ನೀಡಿ ಹೋಗಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಈ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.
ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಗುರುವಾರ ಅಪರಾಧ ವಿಭಾಗದ ತಂಡ ದೂರುದಾರರಿಗೆ ಮತ್ತು ಆಕೆಯ ಪತಿಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಹೆಚ್ಚಿನ ತನಿಖೆಯಿಂದಾಗಿ ತಾಯಿಯೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತನಿಖೆ ವೇಳೆ ಮನೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಮಗುವನ್ನು ಎಸೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ಪರಿಹಾರ – ಸರ್ಕಾರದಿಂದ ಆದೇಶ ಪರಿಷ್ಕರಣೆ
ಆರೋಪಿಯು 2011ರಲ್ಲಿ ಮದುವೆಯಾಗಿದ್ದು, 2013ರಲ್ಲಿ ಮಗಳೊಂದು ಜನಿಸಿತ್ತು. ಮಹಿಳೆ ಎರಡನೇ ಬಾರಿಗೆ ಗರ್ಭಿಣಿಯಾದಾಗ, ಆಕೆಯ ಅತ್ತೆ ಮಾವಂದಿರು ಮಗುವಿನ ಲಿಂಗವನ್ನು ನಿರ್ಧರಿಸಲು ಮಾಟಮಂತ್ರ ಮಾಡಿದ್ದರು ಮತ್ತು ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಿದರು. ಇದೇ ರೀತಿ ಮಹಿಳೆಗೆ ಮೂರು ಬಾರಿ ಗರ್ಭಪಾತವನ್ನು ಮಾಡಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ