ಮುಂಬೈ: ನಗರದ ಜೆಜೆ ಆಸ್ಪತ್ರೆಯಲ್ಲಿ ಮಹಿಳೆ ಸೇರಿ ಇಬ್ಬರು ಡಾಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.
ರೋಗಿಯ ಸಂಬಂಧಿಕರೇ ಈ ಕೃತ್ಯ ಎಸಗಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಏನಿದು ಪ್ರಕರಣ?: ಜೆಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 45 ವರ್ಷದ ಝೈದ ಶೇಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ವಿಚಾರವನ್ನು ವೈದ್ಯರು ಮೃತನ ಸಂಬಂಧಿಕರಿಗೆ ತಿಳಿಸಿದ್ದಾರೆ. ಈ ವೇಳೆ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದು ಮಾತ್ರವಲ್ಲದೇ ವೈದ್ಯೆ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾರೆ ಅಂತ ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Resident doctors at #Mumbai's Sion Hospital hold strike (Out Patient Department services), against alleged assault of two resident doctors at JJ Hospital by a patient's family on May 19. pic.twitter.com/r4SGADAPX1
— ANI (@ANI) May 21, 2018
Advertisement
ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆಗೈಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಡಾಕ್ಟರ್, ಮೃತನ ಸಂಬಂಧಿಕರಿಗೆ ವಿಷಯನ್ನು ವಿವರಿಸಿದ್ದಾರೆ. ಆಗ ತಾಳ್ಮೆಯಿಂದ ಆಲಿಸುತ್ತಿದ್ದ ಮೂವರು ಸಂಬಂಧಿಕರಲ್ಲಿ ಓರ್ವ ಡಾಕ್ಟರ್‍ನ ಕಪಾಳಕ್ಕೆ ಬಾರಿಸಿದ್ದಾನೆ. ಅಷ್ಟರಲ್ಲಿ ಉಳಿದಿಬ್ಬರು ಕೂಡ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ನಂತರ ಆಸ್ಪತ್ರೆಯ ಆವರಣದಿಂದ ಡಾಕ್ಟರ್ ಓಡಿಹೋದ್ರು ಬಿಡದೇ ಹಿಡಿದು ಥಳಿಸಿರುವುದು ವಿಡಿಯೋದಲ್ಲಿ ಕಾಣಬಹುದು.
Advertisement
ಸದ್ಯ ಘಟನೆಯನ್ನು ಖಂಡಿಸಿ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
https://www.youtube.com/watch?v=FbYgO94Prh4
Resident doctors in Mumbai's JJ Hospital staged candle march protest demanding security after 2 doctors were allegedly thrashed by a patient's family. Resident doctors say,"We'll continue our protest until our demands are accepted by govt. Emergency services won't be hampered." pic.twitter.com/M5tXA4AjI5
— ANI (@ANI) May 20, 2018