ನವದೆಹಲಿ: ಹನುಮಾನ್ ಚಾಲೀಸಾ ಪಠಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ರಾಣಾ ಮತ್ತು ಪತಿ ಶಾಸಕ ರವಿ ರಾಣಾ ಪೊಲೀಸ್ ಠಾಣೆಯಲ್ಲಿ ಚಹಾ ಕುಡಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ದಂಪತಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
Advertisement
Do we say anything more pic.twitter.com/GuUxldBKD5
— Sanjay Pandey (@sanjayp_1) April 26, 2022
Advertisement
ಸೋಮವಾರ, ನವನೀತ್ ರಾಣಾ ಅವರು ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಬಂಧನದ ನಂತರ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಜಾತಿಯ ಕಾರಣಕ್ಕಾಗಿ ತನ್ನನ್ನು ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ. ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ
Advertisement
ಸೋಮವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಅವರನ್ನು ಬಂಧಿಸಲಾಯಿತು. ಆದರೆ ಜೈಲಿನೊಳಗೆ ತಮ್ಮ ವಿರುದ್ಧ ಜಾತಿ ನಿಂದನೆ ಮಾಡುತ್ತಿದ್ದಾರೆ, ಕುಡಿಯಲು ನೀರು ಸಹ ನೀಡದೇ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.
ಪತ್ರದಲ್ಲಿ ರಾಣಾ ಅವರು, ನಾನು ರಾತ್ರಿಯಿಡೀ ಕುಡಿಯುವ ನೀರಿಗಾಗಿ ಪದೇ, ಪದೇ ಬೇಡಿಕೆ ಇಟ್ಟಿದ್ದೇನೆ. ಆದರೆ ಕುಡಿಯುವ ನೀರು ನೀಡಲಿಲ್ಲ, ಪೊಲೀಸ್ ಸಿಬ್ಬಂದಿ ನಾನು ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ನನಗೆ ಒಂದೇ ಲೋಟದಲ್ಲಿ ನೀರು ಕೊಡುವುದಿಲ್ಲ ಎಂದು ಹೇಳಿದರು. ಹೀಗಾಗಿ, ನನ್ನ ಜಾತಿಯ ಆಧಾರದ ಮೇಲೆ ನನ್ನನ್ನು ನೇರವಾಗಿ ನಿಂದಿಸಲಾಗಿದೆ. ಕುಡಿಯುವ ನೀರನ್ನು ಒದಗಿಸದ ಕಾರಣ ಪತ್ರ ಬರೆಯುತ್ತಿದ್ದೇನೆ. ಇದರಿಂದಾಗಿ ನನಗೆ ಬಹಳ ಆಘಾತವಾಗಿದೆ. ಖಾರ್ ಪೊಲೀಸ್ ಠಾಣೆಯ ಲಾಕ್‍ಅಪ್‍ನಲ್ಲಿ ನನಗೆ ನೀಡಿದ ಔಪಚಾರಿಕತೆ ಪ್ರಾಣಿಗಳಿಗೆ ನೀಡುವುದಕ್ಕಿಂತ ಕೆಟ್ಟದಾಗಿದೆ ಎಂದು ತಿಳಿಸಿದ್ದರು. ಆದರೀಗ ಇದೇ ದಂಪತಿ ಪೊಲೀಸ್ ಠಾನೆಯಲ್ಲಿ ಚಹಾ ಸೇವಿಸುತ್ತಿರುವ ವೀಡಿಯೋವನ್ನು ಪೊಲೀಸ್ ಅಧಿಕಾರಿ ಹಂಚಿಕೊಂಡಿದ್ದಾರೆ.