Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

Public TV
2 Min Read
Mumbai Toll Eknath Shinde

– ಅ.14 ಮಧ್ಯರಾತ್ರಿಯಿಂದ ಐದು ಟೋಲ್‌ಗಳ ಮೂಲಕ ಉಚಿತ ಪ್ರವೇಶ

ಮುಂಬೈ: ಇಂದು (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು ಎಂದು ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಘೋಷಿಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಮಹಾರಾಷ್ಟ್ರ ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಿದ್ದು, ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ. ಮುಂಬೈ ಟೋಲ್ ನಾಕಾಗಳ ಪೈಕಿ 5 ಟೋಲ್ ನಾಕಾಗಳಲ್ಲಿ ಖಾಸಗಿ ಲಘು ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ. ಸೋಮವಾರ ರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದ್ದು, ಐದು ಟೋಲ್‌ಗಳ ನಾಕಾಗಳ ಮೂಲಕ ಲಘು ವಾಹನಗಳು ಟೋಲ್ ಮುಕ್ತವಾಗಿ ಪ್ರವೇಶಿಸಬಹುದು.ಇದನ್ನೂ ಓದಿ:5 ವರ್ಷ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಅವರಿಂದ ಹೇಳಿಸಿ ನೋಡೋಣ: ಬಿವೈವಿ

ಲಘು ವಾಹನಗಳ ವರ್ಗದಲ್ಲಿ ಕಾರುಗಳು (ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಸ್‌ಯುವಿಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ. ಪ್ರತಿನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ದಾಟುತ್ತಿದ್ದು, ಅದರಲ್ಲಿ ಶೇ.80ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಸರ್ಕಾರ ಹೇಳಿದೆ.

ಐದು ಟೋಲ್ ನಾಕಾಗಳಾದ ದಹಿಸರ್, ಮುಲುಂಡ್, ವಾಶಿ, ಐರೋಲಿ ಮತ್ತು ತಿನ್ಹಾಂತ್ ನಾಕಾದಿಂದ ಟೋಲ್ ಪಾವತಿಸದೇ ಲಘು ವಾಹನಗಳು ಪ್ರವೇಶಿಸಬಹುದು. ಇನ್ನುಳಿದ ಟೋಲ್ ನಾಕಾಗಳಿಂದ 45 ರೂ.ಯನ್ನು ಪಾವತಿಸಬೇಕು.

ಲಘು ವಾಹನಗಳ ಮೂಲಕ ದಿನನಿತ್ಯ ಮುಂಬೈ (Mumbai) ನಗರಕ್ಕೆ ಪ್ರವೇಶಿಸುವ ಜನರಿಗೆ ಇದು ಪ್ರಯೋಜನಕಾರಿ ಹಾಗೂ ಇನ್ನುಳಿದ ಟೋಲ್ ನಾಕಾಗಳಲ್ಲಿ ಟೋಲ್ ಶುಲ್ಕದಲ್ಲಿ ವಿನಾಯಿತಿಯನ್ನು ಪಡೆಯುತ್ತಾರೆ. ಇಲ್ಲಿನ ಟೋಲ್ ನಾಕಾಗಳು ಮುಂಬೈನ ರಸ್ತೆ ಮೂಲಸೌಕರ್ಯದ ಮಹತ್ವದ ಭಾಗವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳಿಗೆ ಸೇವೆ ಸಲ್ಲಿಸುತ್ತಿವೆ.

ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಮನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿರ್ಧಾರದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದ ಅವರು, ಅ.14 ಮಧ್ಯರಾತ್ರಿಯಿಂದ ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಗೇಟ್‌ಗಳಲ್ಲಿ ಲಘು ವಾಹನಗಳು ಟೋಲ್ ಮುಕ್ತವಾಗಿರುತ್ತವೆ. ಮುಂಬೈನಲ್ಲಿ ವಾಸಿಸುವ ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ:ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್

Share This Article