ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ

Public TV
1 Min Read
MUMBAI ATTACK

ಇಸ್ಲಾಮಾಬಾದ್: 2008 ರಲ್ಲಿ ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್‌ಗೆ ಹಣಕಾಸಿಕ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈ ತಿಂಗಳ ಆರಂಭದಲ್ಲಿ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ನಿಷೇಧಿತ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮಿರ್‌ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ.

ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಇಂತಹ ಪ್ರಕರಣಗಳಲ್ಲಿ ಶಂಕಿತರ ಶಿಕ್ಷೆಯನ್ನು ಮಾಧ್ಯಮಗಳಿಗೆ ಪ್ರಕಟಿಸುತ್ತದೆ. ಈ ಪ್ರಕರಣದಲ್ಲಿ ಮಿರ್‌ನ ಶಿಕ್ಷೆಯನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಶಿವರಾತ್ರಿಯಂದು ಗಲಭೆ – 1 ವರ್ಷ ಬೆಳಗಾವಿ ಜೈಲಿನಲ್ಲೇ ಇರಲಿದ್ದಾನೆ ಮಾಸ್ಟರ್ ಮೈಂಡ್ ಅನ್ಸಾರಿ

jail 1

ಮುಂಬೈ ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಮೀರ್ ಕೋಟ್ ಲಖ್ಪತ್ ಜೈಲಿನಲ್ಲಿದ್ದು, ನ್ಯಾಯಾಲಯ ಆತನಿಗೆ 4,00,000 ರೂ.ಗೂ ಹೆಚ್ಚಿನ ದಂಡವನ್ನು ವಿಧಿಸಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಭಯೋತ್ಪಾದಕ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿತ್ತು. ಇದನ್ನೂ ಓದಿ: ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

26/11 ಮುಂಬೈ ದಾಳಿಯಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಸಾಜಿದ್ ಮಜೀದ್ ಮಿರ್ 166 ಜನರ ಸಾವಿಗೆ ಕಾರಣನಾಗಿದ್ದು, ಭಾತರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿದ್ದಾನೆ. ಆತ 2005 ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದ.

Live Tv

Share This Article
Leave a Comment

Leave a Reply

Your email address will not be published. Required fields are marked *