ಮುಂಬೈ: ನಾಯಿಯೊಂದಿಗೆ ಅಸಹಜವಾಗಿ ಸೆಕ್ಸ್ ಮಾಡಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮುಂಬೈನ ಉಪನಗರ ಪೊವೈ ಎಂಬಲ್ಲಿ ನಡೆದಿರುವುದಾಗಿ ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ದೂರಿನಂತೆ ಪೊಲೀಸರು ಕುಲ್ದೀಪ್ ಕರೋಟಿಯಾ ಎಂಬಾತನ್ನು ಬಂಧಿಸಿದ್ದಾರೆ. ಈತ ಶೌಚಾಲಯದಲ್ಲಿ ನಾಯಿಯೊಂದಿಗೆ ಸೆಕ್ಸ್ ಮಾಡಿದ್ದಾಗಿ ಪ್ರತ್ಯಕ್ಷದರ್ಶಿ ದೂರಿನಲ್ಲಿ ತಿಳಿಸಿದ್ದರು. ಘಟನೆಯ ಬಳಿಕ ಯುವಕ ಭಯಗೊಂಡು ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಹಾಗೂ ಈ ಬಗ್ಗೆ ದೂರು ದಾಖಲಿಸದಂತೆ ಪ್ರತ್ಯಕ್ಷದರ್ಶಿಗೆ ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಮ್ ಗೆ ಮಾಹಿತಿ ರವಾನಿಸಿದ್ದರು. ಬಳಿಕ ಪೊವೈ ಪೊಲೀಸರು ಶುಕ್ರವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯ ನಂತರ ಆತನನ್ನು ಬಂಧಿಸಿದ್ದಾರೆ. ಸದ್ಯ ಪೂವೈ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.