ಮುಂಬೈ: ಸುಪ್ರೀಂಕೋರ್ಟ್ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಂದು ಕೋರ್ಟ್ ಏನು ಆದೇಶ ನೀಡುತ್ತದೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರಾಜೀನಾಮೆ ನೀಡಿರುವ ಮಸ್ಕಿ ಕೈ ಶಾಸಕ ಪ್ರತಾಪ್‍ಗೌಡ ಪಾಟೀಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇವತ್ತು ಸಿಎಂ ವಿಶ್ವಾಸಮತಯಾಚನೆ ಮಾಡುತ್ತೇನೆ ಎಂದು ಹೇಳಿರುವ ಹಿಂದಿನ ಉದ್ದೇಶ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಅವರಿಗೆ ಬಹುಮತ ಇಲ್ಲ ಎಂದು ಗೊತ್ತಿದ್ದರೂ ಸಹ ಮತ್ತೆ ಅದೇ ವಿಪ್ ಜಾರಿ ಮಾಡುವ ನಿಟ್ಟಿನಲ್ಲಿ ಏನಾದರೂ ವಿಶ್ವಾಸ ಮತಯಾಚನೆ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
Advertisement
Advertisement
ವಿಧಾಸಭೆಯಲ್ಲಿ ಘಟನೆಗಳ ಬಗ್ಗೆ ವಿವರಣೆಯನ್ನು ನೀಡಿ ರಾಜೀನಾಮೆ ಕೊಟ್ಟು ಹೋಗುತ್ತಾರೆ ಅನ್ನಿಸುತ್ತಿದೆ. ಇದು ಬಹುಮತ ಕಳೆದುಕೊಂಡಿರುವ ಸರ್ಕಾರ, ಆದರೂ ಸಿಎಂ ನಾನು ಬಹುಮತ ಸಾಬೀತುಪಡಿಸುತ್ತೇನೆ ಅಂತಿದ್ದಾರೆ ಅಂದ್ರೆ ಅವರು ಯಾವ ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಎಲ್ಲರೂ ನಮ್ಮ ರಾಜೀನಾಮೆಗೆ ಬದ್ಧರಾಗಿದ್ದೇವೆ. ಇದು ಅಲ್ಪ ಮತದ ಸರ್ಕಾರ ಆಗಿರುವುದರಿಂದ, ಸಿಎಂ ರಾಜೀನಾಮೆ ಕೊಡಲಿ ಎಂದು ಕೇಳುತ್ತೇವೆ ಎಂದು ಹೇಳಿದರು.