CinemaLatestNational

ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟ: ಸನ್ನಿ ಲಿಯೋನ್

ಮುಂಬೈ: ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟವಾಗುತ್ತದೆ ಎಂದು ಬಾಲಿವುಡ್‍ನ ಮಾದಕ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

ಸಿನಿಮಾ ಮತ್ತು ರಿಯಾಲಿಟಿ ಶೋಗಳ ಜೊತೆಗೆ ವೆಬ್ ಸೀರಿಸ್‍ನಲ್ಲೂ ನಟಿಸುತ್ತಿರುವ ಸನ್ನಿ, ಆನ್‍ಲೈನ್ ಚಾನೆಲ್‍ವೊಂದರಲ್ಲಿ ಪ್ರಸಾರವಾಗುವ ವೈಬ್ ಸೀರಿಸ್‍ನಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಇದು ಕಾಮಿಡಿ ವೆಬ್ ಸೀರಿಸ್ ಆಗಿದ್ದು, ನನಗೆ ಕಾಮಿಡಿ ಚಿತ್ರಗಳಲ್ಲಿ ನಟಿಸಲು ತುಂಬಾ ಇಷ್ಟ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಬಹಳ ಸಂತೋಷ ಕೊಡುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನ್, ಈಗ ಸದ್ಯಕ್ಕೆ ವೆಬ್ ಸೀರಿಸ್ ಬಗ್ಗೆ ಹಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ. ಆದರೆ ಈ ವೆಬ್ ಸೀರಿಸ್‍ಗಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ. ಇದರಲ್ಲಿ ಕಾಮಿಡಿ ಜಾನರ್ ನಲ್ಲಿ ನಟಿಸಲು ಬಹಳ ಸಂತೋಷವಾಗುತ್ತಿದೆ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಾವೇ ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿರುವ ಸನ್ನಿ, ಈ ಹಿಂದೆ ಕೆಲ ವೆಬ್ ಸೀರಿಸ್‍ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತನ್ನದೇ ಬಯೋಗ್ರಫಿಯಾದ ಕರೆನ್ಜಿತ್ ಕೌರ್ ಮತ್ತು ರಾಗಿಣಿ ಎಂಎಂಎಸ್ ರಿಟನ್ರ್ಸ್-2 ಎಂಬ ವೆಬ್ ಸೀರಿಸ್‍ನಲ್ಲಿ ನಟಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ವಾಟ್ ದಿ ಲವ್ ವಿತ್ ಕರಣ್ ಜೋಹರ್ ಎಂಬ ವೆಬ್ ಸರಣಿಯಲ್ಲಿ ಅಭಿನಯಿಸಿದ್ದರು.

ಈ ಮೂರು ವೆಬ್ ಸರಣಿಗಳ ನಂತರ ಈಗ ಕಾಮಿಡಿ ಜಾನರ್ ನಲ್ಲಿ ಬರುತ್ತಿರುವ ವೆಬ್ ಸೀರಿಸ್ ಮಾಡಲು ಸನ್ನಿ ಓಕೆ ಎಂದಿದ್ದಾರೆ. ಈ ಮೂಲಕ ಇಷ್ಟು ದಿನ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಈ ಹಾಟ್ ಬ್ಯೂಟಿ, ಈಗ ಪ್ರೇಕ್ಷಕರನ್ನು ನಗೆ ಎಂಬ ದೋಣಿಯಲ್ಲಿ ತೇಲಿಸಲು ಸಿದ್ಧವಾಗಿದ್ದಾರೆ. ಆದರೆ ಈ ವೆಬ್ ಸೀರಿಸ್ ಯಾವಾಗ ಬಿಡುಗಡೆಯಾಗುತ್ತದೆ. ಉಳಿದ ಕಲಾವಿದರ ವಿವರ ತಿಳಿಯಬೇಕಿದೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ, ತನ್ನ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿ ಅದನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತಗೆ ಇಬ್ಬರು ಮಕ್ಕಳಿಗೂ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಜೀವನದ ಪ್ರತಿಯೊಂದು ದಿನವನ್ನು ಸಂತೋಷವನ್ನಾಗಿ ಮಾಡಿದ್ದೀರಿ. ಪ್ರತಿ ಬಾರಿ ನೀವು ನಕ್ಕು ಕುಣಿದಾಡಿದಾಗ, ಡ್ಯಾನ್ಸ್, ಹಾಡು, ನನ್ನನ್ನು ಅಮ್ಮಾ ಎಂದು ಕರೆದಾಗ ಹೃದಯ ಕರಗಿದಂತ ಅನುಭವವಾಗುತ್ತದೆ. ನನ್ನ ಮಕ್ಕಳ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಸದಾ ಪ್ರಾರ್ಥಿಸುತ್ತೇನೆ ಎಂದು ಸನ್ನಿ ಲಿಯೋನ್ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು.

https://www.instagram.com/p/B8bvjAFB5Mo/

Leave a Reply

Your email address will not be published.

Back to top button