ನವದೆಹಲಿ: ಕಂಪ್ಯೂಟರ್ ಸೈನ್ಸ್ ಕಲಿಕೆಗಾಗಿ ಅಮೆರಿಕಾಗೆ ತೆರಳಿದ್ದ ಟೀಂ ಇಂಡಿಯಾ ಅಂಡರ್ 19 ಕ್ರಿಕೆಟ್ ತಂಡದ ಆಟಗಾರನಿಗ ಅಮೆರಿಕಾ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.
ಹೌದು, 19ರ ವಯೋಮಿತಿಯ 2010ರ-ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದಿದ್ದ ಸೌರಭ್ ನೇತ್ರವಾಳ್ಕರ್ (27) ಈಗ ಅಮೆರಿಕಾ ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ.
Advertisement
ಸೌರಭ್ ಆರು ಅಡಿ ಎತ್ತರವಿದ್ದು, ಎಡಗೈ ಬಾಲಿಂಗ್ ಮಾಡುತ್ತಾರೆ. 2010ರ ವಿಶ್ವಕಪ್ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಸೌರಭ್ ಇಂಗ್ಲೆಂಡ್ ಭವಿಷ್ಯದ ನಾಯಕ ಜೋಯ್ ರೂಟ್ ಮತ್ತು ಪಾಕಿಸ್ತಾನದ ಆರಂಭಿಕ ಸ್ಫೋಟಕ ಬ್ಯಾಟ್ಸ್‍ಮನ್ ಶೆಹಝಾದ್ ಅವರ ವಿಕೆಟ್ ಕಬಳಿಸಿದ್ದರು. ಅಂಡರ್ 19 ವಿಶ್ವಕಪ್ ಬಳಿಕ ಸೌರಭ್ ಅವರು, ಮುಂಬೈ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದು, ಆಗ ಕರ್ನಾಟಕದ ವಿರುದ್ಧ ಮೂರು ವಿಕೆಟ್ ಪಡೆದಿದ್ದರು.
Advertisement
Advertisement
ಮಾಧ್ಯಮವೊಂದರ ಜೊತೆಗೆ ತಮ್ಮ ಕ್ರಿಕೆಟ್ ಜೀವನದ ಕುರಿತು ಹೇಳಿಕೊಂಡಿರುವ ಸೌರಭ್, ಎರಡು ವರ್ಷ ಕಾಲ ಪೂರ್ಣಾವಧಿ ಸಮಯವನ್ನು ಕ್ರಿಕೆಟ್‍ಗಾಗಿ ಮುಡಿಪಾಗಿಟ್ಟೆ. ಆದರೆ ಮುಂದಿನ ಹಂತ ತಲುಪಲು ಸಾಧ್ಯವಾಗಲಿಲ್ಲ. ಈ ವೇಳೆಗಾಗಲೇ ನಾನು ಮುಂಬೈನ ಸರ್ದಾರ್ ಪಟೇಲ್ ಇನ್‍ಸ್ಟಿಟ್ಯೂಟ್‍ನಲ್ಲಿ ವಿಜ್ಞಾನ ಪದವಿ ಪಡೆದಿದ್ದೆ. ಬಳಿಕ ಜಿಆರ್ ಇ ಮತ್ತು ಟಿಓಟಿಎಫ್‍ಎಲ್ ಪರೀಕ್ಷೆ ಬರೆದು ಆಯ್ಕೆಯಾಗಿದ್ದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿಯುವ ಹಾಗೂ ಭವಿಷ್ಯದ ಸಿದ್ಧತೆಗೆ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದ್ದಾರೆ.
Advertisement
ವ್ಯಾಸಂಗ ಪೂರ್ಣಗೊಳಿಸಿ, ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಒರ್ಯಾಕಲ್‍ನಲ್ಲಿ ಕೆಲಸ ಆರಂಭಿಸಿದೆ. ಸ್ಯಾನ್‍ಪ್ರಾನ್ಸಿಸ್ಕೋದಲ್ಲಿ ಇದ್ದ ನಾನು ಲಾಸ್‍ಎಂಜಲೀಸ್‍ಗೆ ಕ್ರಿಕೆಟ್ ಆಡಲು ಹೋಗುತ್ತಿದ್ದೆ. ಆಫೀಸ್‍ನಲ್ಲಿ ರಜೆ ಪಡೆದು ಪ್ರತಿ ಶುಕ್ರವಾರ ಲಾಸ್‍ಎಂಜಲೀಸ್‍ಗೆ ಹೋಗುತ್ತಿದ್ದೆ. ಅಂದು ಅಭ್ಯಾಸ ಮಾಡಿ, ಶನಿವಾರ ಹಾಗೂ ಭಾನುವಾರ 50 ಓವರ್ ಮ್ಯಾಚ್ ಆಡಿ ಮತ್ತೆ ಸ್ಯಾನ್‍ಫ್ರಾನ್ಸಿಸ್ಕೋಗೆ ಮರಳುತ್ತಿದ್ದೆ. ಶ್ರದ್ಧೆಯಿಂದ ಉತ್ತಮ ಪ್ರದರ್ಶನ ನೀಡಿದೆ. ಇದನ್ನು ಗಮನಿಸಿದ ಆಯ್ಕೆ ತಂಡ ನನ್ನನ್ನು ಅಮೆರಿಕಾ ಟೀಂಗೆ ಆಯ್ಕೆ ಮಾಡಿಕೊಂಡು, ಕ್ಯಾಪ್ಟನ್ ಜವಾಬ್ದಾರಿ ನೀಡಿದೆ ಎಂದು ಸೌರಭ್ ವಿವರಿಸಿದ್ದಾರೆ.
ಅಮೆರಿಕಾ ಕ್ರಿಕೆಟ್ ಆಯ್ಕೆಯಲ್ಲಿ 48 ರಾಜ್ಯಗಳ ಒಟ್ಟು 2 ಲಕ್ಷ ಜನರು ಭಾಗವಹಿಸಿದ್ದರು. ಅವರನ್ನು 6 ಸಾವಿರ ತಂಡವಾಗಿ ಮಾಡಿ, 400 ಲೀಗ್ ಆಡಿಸಲಾಗಿತ್ತು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವವರು ಸಾಮಾನ್ಯವಾಗಿ ಭಾರತ, ಪಾಕಿಸ್ತಾನ ಹಾಗೂ ವೆಸ್ಟ್‍ಇಂಡಿಯನ್ಸ್ ಗಳೆ ಇದ್ದಾರೆ. ಸೌರಭ್ ಜೊತೆಗೆ ಹೈದ್ರಾಬಾದ್ ಮೂಲದ ಇಬ್ರಾಹಿಂ ಖಲೀಕ್ ಕೂಡ ಆಯ್ಕೆಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv