ಮುಂಬೈ: ಚುನಾವಣೆ ಮುಗಿದು ಫಲಿತಾಂಶ ಬಂದು ವಾರ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಿಲ್ಲ. ಮುಖ್ಯಮಂತ್ರಿ ಪಟ್ಟದ ಪಟ್ಟನ್ನು ಶಿವಸೇನೆ ಸಡಿಲಿಸಿಲ್ಲ.
ಶಿವಸೇನೆಯು ಗುರುವಾರ ಸಂಜೆ ವೇಳೆಗೆ ರಾಜ್ಯಪಾಲರನ್ನು ಭೇಟಿಯಾಗಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಜೊತೆಗೆ, ಎನ್‍ಸಿಪಿ, ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಗೆ ತಲೆಬಿಸಿ ಹೆಚ್ಚಿಸಿದೆ. ಈ ಮಧ್ಯೆ ಶಿವಸೇನೆ ಶಾಸಕಾಂಗ ಸಭೆಯ ನಾಯಕರಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ.
Advertisement
Mumbai: Shiv Sena delegation including Aditya Thackeray, Ramdas Kadam, Eknath Shinde meets Governor Bhagat Singh Koshyari at the Raj Bhavan. pic.twitter.com/6OS4HQkiH1
— ANI (@ANI) October 31, 2019
Advertisement
ಏಕನಾಥ್ ಶಿಂಧೆ ಮತ್ತು ಸುಭಾಶ್ ದೇಸಾಯಿ ಮಧ್ಯೆ ಫೈಟ್ ಇತ್ತು. ಇಬ್ಬರೂ ಫಡ್ನವೀಸ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಶಿಂಧೆ ಅವರಿಗೆ ಅದೃಷ್ಟ ಒಲಿದಿದೆ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಗೊಂದಿರುವ 29 ವರ್ಷದ ಆದಿತ್ಯ ಠಾಕ್ರೆ ಇನ್ನೂ ಶಾಸಕಂಗದ ಕಾರ್ಯನಿರ್ವಹಣೆಯ ಬಗ್ಗೆ ಒಂದೆರಡು ವರ್ಷಗಳ ಕಾಲ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸದ್ಯಕ್ಕೆ ಆದಿತ್ಯ ಠಾಕ್ರೆ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದಿಲ್ಲ ಅಂತ ಶಿವಸೇನೆ ಸ್ಪಷ್ಟಪಡಿಸಿದೆ.
Advertisement
ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆದಿತ್ಯ ಠಾಕ್ರೆ, ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ರೈತರು ಮತ್ತು ಮೀನುಗಾರರಿಗೆ ನೆರವು ನೀಡುವಂತೆ ರಾಜ್ಯಪಾಲರನ್ನು ಕೋರಿದ್ದೇವೆ. ಅವರು ಸ್ವತಃ ಕೇಂದ್ರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
Advertisement
Aditya Thackeray, Shiv Sena after meeting Maharashtra Governor: We requested Governor to provide assistance to farmers and fishermen who suffered damages due to recent rains. He has assured us that he himself will talk to the Centre. pic.twitter.com/Wdyj3oJIir
— ANI (@ANI) October 31, 2019