ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

Public TV
2 Min Read
shilpa shetty raj kundra

ಮುಂಬೈ: ಬಾಲಿವುಡ್ ಚೆಲುವೆ, ಕುಡ್ಲದ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ ಅವರು ‘ಬಿಬಿಸಿ’ ಎಂದು ಹೆಸರನ್ನು ಇಟ್ಟಿದ್ದಾರೆ.

ಈ ವಿಚಾರ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಒಪ್ಪಿಕೊಂಡಿದ್ದು, ಹೌದು ನನ್ನ ಪತಿ ರಾಜ್ ಕುಂದ್ರಾ ನನನ್ನು ಬಿಬಿಸಿ ಎಂದು ಕರೆಯುತ್ತಾರೆ. ಬಿಬಿಸಿ ಎಂದರೆ ಬೇರೆ ಅರ್ಥ ಏನೂ ಇಲ್ಲ ಬಿಬಿಸಿ ಎಂದರೆ ಕಂಪ್ಯೂಟರ್ ಬರುವುದಕ್ಕೆ ಮುಂಚೆ ಹುಟ್ಟಿರುವವರು (ಬಾರ್ನ್ ಬಿಫೋರ್ ಕಂಪ್ಯೂಟರ್) ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಇತ್ತೀಚೆಗೆ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಈ ವಿಚಾರವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. ನನ್ನ ಪತಿ ನನ್ನನ್ನು ಬಿಬಿಸಿ ಎಂಬ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ನಾನು ತಂತ್ರಜ್ಞಾನವನ್ನು ಬಳಕೆ ಮಡುವುದರಲ್ಲಿ ಸ್ವಲ್ಪ ಹಿಂದೆ ಇದ್ದೇನೆ. ಆದರಿಂದ ನನ್ನನ್ನು ರಾಜ್ ಕುಂದ್ರಾ ಬಾರ್ನ್ ಬಿಫೋರ್ ಕಂಪ್ಯೂಟರ್ ಎಂದು ಕರೆಯುತ್ತಾರೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

shilpa

ಈ ವೇಳೆ ಈ ಶೋನಲ್ಲಿ ಇದ್ದ ನಟಿ ಅರ್ಚನಾ ಪುರಾನ್ ಸಿಂಗ್ ಅವರು, ನಿಮಗೆ ತಂತ್ರಜ್ಞಾನವನ್ನು ಬಳಸಲು ಬರಲ್ಲ ಎಂದು ಹೇಳುತ್ತೀರಿ. ಆದರೆ ಯಾವಗಲೂ ಇನ್‍ಸ್ಟಾಗ್ರಾಮ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಎಂದು ಶಿಲ್ಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಲ್ಪಾ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಲು ಬೇಸಿಕ್ ಮಾಹಿತಿ ಇದ್ದರೆ ಸಾಕು ಅದಕ್ಕೆ ಹೆಚ್ಚು ಶ್ರಮ ಹಾಕಬೇಕಿಲ್ಲ ಎಂದಿದ್ದಾರೆ.

ಆದರೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಷ್ಟು ಸುಲಭದಲ್ಲಿ ಇಂಟರ್ ನೆಟ್‍ನಲ್ಲಿ ಬೇರೆ ಕೆಲಸ ಮಾಡಲು ನನಗೆ ಬರುವುದಿಲ್ಲ. ಉದಾಹರಣೆಗೆ ನನ್ನ ಮಕ್ಕಳ ಹೋಮ್‍ವರ್ಕ್ ಅನ್ನು ಶಾಲೆಯವರು ನಮಗೆ ಮೇಲ್ ಮಾಡುತ್ತಾರೆ. ನನಗೆ ಅದನ್ನು ತೆಗೆದು ಓದಿ ಅದನ್ನು ಪ್ರಿಂಟ್‍ಔಟ್ ತೆಗೆಯುವ ಕೆಲಸ ಸಖತ್ ಬೇಸರ ತರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪೆನ್, ಬುಕ್‍ಗಳನ್ನು ಯಾರೂ ಬಳುಸುತ್ತಿಲ್ಲ. ಬದಲಿಗೆ ಮೇಲ್, ಪಿಡಿಎಫ್ ಎಂಬ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ.

Shilpa Shetty

ಆಗ ಮಾತನಾಡಿದ ಅರ್ಚನಾ ಪುರಾನ್ ಸಿಂಗ್ ನನ್ನ ಮಗಳು ಬೆಳೆಯುತ್ತಿದ್ದಾಳೆ. ನಾನು ಕೂಡ ಈ ರೀತಿಯ ಸಂದರ್ಭಕ್ಕೆ ಸಿದ್ಧವಾಗಬೇಕು ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್, ನನಗೆ ಮಕ್ಕಳ ಹೋಮ್‍ವರ್ಕ್ ಅನ್ನು ಪೋಷಕರ ಮೇಲ್‍ಗೆ ಕಳುಹಿಸುತ್ತಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಹಾಗಾದರೆ ಮೇಲ್ ಐಡಿ ಇಲ್ಲದ ಪೋಷಕರ ಕಥೆ ಏನು ಎಂದು ಹಾಸ್ಯ ಮಾಡಿದ್ದಾರೆ.

ಸ್ವಲ್ಪ ಸಮಯದಿಂದ ಚಿತ್ರಲೋಕದಿಂದ ದೂರ ಇದ್ದ ಶಿಲ್ಪಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗಿದ್ದಾರೆ. ಅವರ ನಟನೆಯ ಹಂಗಾಮಾ-2 ಮತ್ತು ನಿಕಮ್ಮಾ ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *