ಮುಂಬೈ: ನನ್ನ ವಾಟ್ಸಪ್ ನಂಬರನ್ನು ಯಾರೋ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಮುಂಬೈನ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ವಾಟ್ಸಪ್ ಹ್ಯಾಕ್ ಮಾಡಿರುವ ಆತ ನನ್ನ ಸಂಪರ್ಕದಲ್ಲಿರುವ ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದಾನೆ. ಮೊದಲಿಗೆ ನಯವಾಗಿ ಮೆಸೇಜ್ ಮಾಡುವ ಆತ ನಂತರ ಅಶ್ಲೀಲ ಲಿಂಕ್ ಕಳುಹಿಸುತ್ತಾನೆ. ಬಳಿಕ ಈ ಲಿಂಕ್‌ನಿಂದ ಬರುವ ಕೋಡ್ ಕಳುಹಿಸಿ ಎಂದು ಕೇಳುತ್ತಾನೆ. ಕೋಡ್ ಕಳುಹಿಸಿದ ನಂತರ ವಿಡಿಯೋ ಕಾಲ್ ಬರುತ್ತದೆ. ಕರೆ ಸ್ವೀಕರಿಸಿದ ನಂತರ ಓರ್ವ ನಗ್ನವಾಗಿ ಅಸಹ್ಯಕರ ಕೃತ್ಯ ಮಾಡುತ್ತಾನೆ ಎಂದು ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ನಟಿ ತೇಜಸ್ವಿ, ಭಾನುವಾರ ನಾನು ನನ್ನ ಧಾರವಾಹಿಯ ವಿಶೇಷ ಸಂಚಿಕೆಯನ್ನು ಚಿತ್ರೀಕರಣ ಮಾಡುತ್ತಿದ್ದೆ. ಈ ವೇಳೆ ನನ್ನ ಮೊಬೈಲ್‌ಗೆ ಒಂದು ವಿಡಿಯೋ ಕರೆ ಬಂತು ನಾನು ಅದನ್ನು ಸ್ವೀಕರಿಸಿದಾಗ ಅದರಲ್ಲಿ ಒಬ್ಬ ನಗ್ನ ಮನುಷ್ಯ ನಿಂತುಕೊಂಡು ಅಸಹ್ಯವಾಗಿ ಏನೋ ಮಾಡುತ್ತಿದ್ದ. ಇದನ್ನು ನೋಡಿದ ನಾನು ಭಯಪಟ್ಟು ಕರೆಯನ್ನು ಕಟ್ ಮಾಡಿದೆ ಎಂದು ವಿವರಿಸಿದ್ದಾರೆ.
Advertisement
ನನಗೆ ಮಾಡಿದ ರೀತಿಯಲ್ಲೇ ನನ್ನ ನಂಬರ್‌ನಿಂದ ನನ್ನ ಸಹೋದ್ಯೋಗಿಗಳಿಗೆ ಮತ್ತು ಸ್ನೇಹಿತರಿಗೆ ಸೇರಿದಂತೆ ಹಲವರಿಗೆ ಈ ರೀತಿ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡಲಾಗಿದೆ. ನಟಿಯರಾದ ಕರಿಷ್ಮಾ ತನ್ನಾ, ತಾನ್ಯಾ ಶರ್ಮಾ ಇನ್ನೂ ಅನೇಕರಿಗೆ ಈ ರೀತಿ ಕರೆ ಹೋಗಿದೆ. ಅವರು ನನಗೆ ಕರೆ ಮಾಡಿ ಈ ವಿಚಾರ ತಿಳಿಸಿದರು. ನಾನು ಒಬ್ಬಳು ಹುಡುಗಿಯಾಗಿ, ನಟಿಯಾಗಿ ಈ ವಿಚಾರದಲ್ಲಿ ತುಂಬಾ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ತೇಜಸ್ವಿ ಅಸಮಾಧಾನ ಹೊರಹಾಕಿದ್ದಾರೆ.
Advertisement
ನಾನು ಈ ವಿಚಾರದ ಬಗ್ಗೆ ನನ್ನ ನಿವಾಸದ ಹತ್ತಿರದಲ್ಲಿರುವ ಗೋರೆಗಾಂವ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಅವರು ನನ್ನನ್ನು ಠಾಣೆಗೆ ಬರಲು ಹೇಳಿದ್ದರು. ಆದರೆ ನಾನು ಸತತವಾಗಿ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಠಾಣೆಗೆ ಹೋಗಿ ಬೇಕಾದ ಮಾಹಿತಿ ನೀಡಿ ಬರುತ್ತೇನೆ ಎಂದು ತೇಜಸ್ವಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.