– ಸೆಕ್ಯೂರಿಟಿ ಗಾರ್ಡ್ ಥಳಿತಕ್ಕೆ ನರಳಿ ನರಳಿ ಪ್ರಾಣಬಿಟ್ಟ ಶ್ವಾನ
ಮುಂಬೈ: ತನ್ನ ಪಾಡಿಗೆ ಮಲಗಿದ್ದ 3 ವರ್ಷದ ಶ್ವಾನಕ್ಕೆ ಸೆಕ್ಯೂರಿಟಿ ಗಾರ್ಡ್ ಹಿಗ್ಗಾಮುಗ್ಗ ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಮುಂಬೈನ ಫೂಲಪ್ಪಾಡ ಪ್ರದೇಶದಲ್ಲಿ ಜೋರಾಗಿ ಮಳೆ ಬರುತ್ತಿತ್ತು. ಹೊರಗಡೆ ಬಂದಿದ್ದ ಸ್ವೀಟಿ ಮಳೆಯಿಂದ ರಕ್ಷಿಸಿಕೊಳ್ಳಲು ಅಪಾರ್ಟ್ ಮೆಂಟೊಳಗೆ ಸೇರಿಕೊಂಡಳು. ಹೀಗೆ ಕುಳಿತಿದ್ದ ಸ್ವೀಟಿ ಅಲ್ಲೇ ಮಲಗಿ ನಿದ್ದೆಗೆ ಜಾರಿದ್ದಳು. ಸ್ವೀಟಿ ನಿದ್ದೆ ಮಾಡುತ್ತಿರುವುದನ್ನು ಗಮನಿಸಿದ ಅಪಾರ್ಟ್ ಮೆಂಟಿನ ಸೆಕ್ಯೂರಿಟಿ ಗಾರ್ಡ್ ರಾಕೇಶ್ ಸಹಾನಿ ಸ್ಥಳಕ್ಕೆ ಬಂದು ಶ್ವಾನಕ್ಕೆ ಮರದ ಕೋಲಿನಿಂದ ಚೆನ್ನಾಗಿ ಥಳಿಸಿದ್ದಾನೆ.
Advertisement
Advertisement
ಸೆಕ್ಯೂರಿಟಿ ಗಾರ್ಡ್ ಸ್ವೀಟಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶ್ವಾನ ನೋವಿನಿಂದ ರೋಧಿಸಿ ಪ್ರಾಣ ಬಿಟ್ಟಿರುವುದನ್ನು ಕಾಣಬಹುದು.
Advertisement
ಈ ಹಿಂದೆಯೂ ಇಂತದ್ದೇ ಘಟನೆ ನಡೆದಿತ್ತು. ಲಕ್ಕಿ ಎಂಬ ಹೆಸರಿನ ಶ್ವಾನವನ್ನು ಸೆಕ್ಯೂರಿಟಿ ಗಾರ್ಡ್ ಹಿಗ್ಗಾಮುಗ್ಗ ಥಳಿಸಿ ಹತ್ಯೆ ಮಾಡಿದ್ದನು. ಈ ವಿಚಾರ ಭಾರೀ ಸದ್ದು ಮಾಡಿದ್ದು, ಬಾಲಿವುಡ್ ಮಂದಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದರು. ಘಟನೆ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ ಪ್ರಕರಣ ನಂತರ ಆರೋಪಿ ತಲೆಮರೆಸಿಕೊಂಡಿದ್ದನು.