ಭೋಪಾಲ್: ಮುಂಬೈ ಮೂಲದ ಪೋರ್ನ್ ಸ್ಟಾರ್ (Porn Star) ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ (Ujjain Family) ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ (Ujjain) ಜಿಲ್ಲೆಯಲ್ಲಿ ನಡೆದಿದೆ.
Advertisement
ಮುಂಬೈನ (Mumbai) ಬಾಲಕಿಯೊಬ್ಬಳು, ಉಜ್ಜಯಿನಿ ನಿವಾಸಿ ಆಶಿಖಾನ್ಗೆ `ಅಕ್ರಮ ಸಂಬಂಧ’ದ ಹೆಸರಿನಲ್ಲಿ ಬ್ಲ್ಯಾಕ್ಮೇಲ್ (Blackmail) ಮಾಡಿದ್ದಾಳೆ ಎಂದು ಕುಟುಂಬ ಆರೋಪಿಸಿದೆ. ಬಳಿಕ ನೋವು ತಾಳಲಾರದೇ ತಾಯಿ, ಹೆಂಡತಿಯೊಂದಿಗೆ ಆಶಿಖಾನ್ ತಾನೂ ವಿಷ ಸೇವಿಸಿ, ವೀಡಿಯೋವನ್ನು ಜಾಲತಾಣದಲ್ಲಿ (Social Media) ಹರಿಯಬಿಟ್ಟಿದ್ದಾರೆ. ಸದ್ಯ ಮೂವರು ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಚಿಲುಮೆ ಡೇಟಾ ಅಕ್ರಮ ಪ್ರಕರಣ – ಆರೋಪಿಗಳಾದ IAS ಅಧಿಕಾರಿಗಳ ಅಮಾನತು ಕ್ರಮ ಹಿಂಪಡೆದ ಸರ್ಕಾರ
Advertisement
Advertisement
ವೀಡಿಯೋನಲ್ಲಿ ಏನಿದೆ?
ಕುಟುಂಬಸ್ಥರು ವಿಷ ಸೇವನೆ ಮಾಡುವುದಕ್ಕೂ ಮುನ್ನ ವ್ಯಕ್ತಿ, `ನನ್ನ ಹೆಸರು ಆಶಿಖಾನ್, ಉಜ್ಜಯಿನಿಯ ಲೋಹೆಪುಲ್ ನಿವಾಸಿ. ಮುಂಬೈನ ರಿಮ್ಜಿಮ್ ದಾಸ್ ಎಂಬ `ಪೋರ್ನ್ ಸ್ಟಾರ್’ ಹಣಕ್ಕಾಗಿ ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾಳೆ. ನಾನು ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ನನ್ನ ಮದುವೆಯ ಸಮಯದಲ್ಲಿ, ನಾನು ಅವಳಿಗೆ ಹಣವನ್ನು ನೀಡಿದ್ದೇನೆ. ಈಗ ಅವಳು ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಿದ್ದಾಳೆ’ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ – ಬಿಜೆಪಿ, ಕಾಂಗ್ರೆಸ್ಗೆ ನಿಖಿಲ್ ತಿರುಗೇಟು
Advertisement
ನಾನು ಮುಂಬೈನಲ್ಲಿದ್ದಾಗ ಆಕೆ ನನ್ನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದಳು. ಉಜ್ಜಯಿನಿಯಲ್ಲೂ ಜೈಲಿಗೆ ಕಳುಹಿಸಿದ್ದಳು. ಈಗ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾಳೆ. ನಾನಿರುವ ಪರಿಸ್ಥಿತಿಯಲ್ಲಿ ಆಕೆಗೆ ಹಣ ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ ಕುಟುಂಬ ಸಮೇತರಾಗಿ ವಿಷ ಸೇವನೆ ಮಾಡುತ್ತಿದ್ದೇವೆ ಎಂದು ಆಶಿಖಾನ್ ಹೇಳಿಕೊಂಡಿದ್ದಾನೆ.