ಮುಂಬೈ: ಪ್ರವಾಹದಲ್ಲಿ ಮುಳುಗುತ್ತಿದ್ದ ನಾಯಿಯನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ್ದು, ಆ ವಿಡಿಯೋವನ್ನು ಮುಂಬೈ ಪೊಲೀಸ್ ಟ್ವೀಟ್ ಮಾಡಿದೆ.
ಮುಂಬೈನಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಪೊಲೀಸ್ ಅಧಿಕಾರಿಯೊಬ್ಬರು ನಾಯಿಯನ್ನು ರಕ್ಷಿಸುತ್ತಿದ್ದ ವಿಡಿಯೋವನ್ನು ಮುಂಬೈ ಪೊಲೀಸ್ ಟ್ವೀಟ್ ಮಾಡಿತ್ತು. ಈ ವಿಡಿಯೋ ಈಗ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೊಲೀಸ್ ಅಧಿಕಾರಿಯಾಗ ಪಿ.ಸಿ ಪ್ರಕಾಶ್ ಪವಾರ್ ನಾಯಿಯನ್ನು ರಕ್ಷಿಸಿದ್ದಾರೆ. ಮುಂಬೈ ಪೊಲೀಸ್ ವಿಡಿಯೋ ಹಾಕಿ ಅದಕ್ಕೆ, “ಮನುಷ್ಯನ ಆತ್ಮೀಯ ಸ್ನೇಹಿತ, ಪಿ.ಸಿ ಪ್ರಕಾಶ್ ಪವಾರ್ ಅವರಲ್ಲಿ ತನ್ನ ಆತ್ಮೀಯ ಸ್ನೇಹಿತನನ್ನು ಕಂಡುಕೊಂಡಿದ್ದಾನೆ” ಎಂದು ತಲೆಬರಹ ನೀಡಿತ್ತು.
Man’s best friend, found its best friend in PC Prakash Pawar too. #FriendsIndeed pic.twitter.com/hCsrDwlfZ5
— मुंबई पोलीस – Mumbai Police (@MumbaiPolice) July 3, 2019
ಪಿ.ಸಿ ಪ್ರಕಾಶ್ ಪವಾರ್ ಅವರ ಈ ವಿಡಿಯೋಗೆ ಇದುವರೆಗೂ 3 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಹಾಗೂ 18 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ವಿಡಿಯೋ ನೋಡಿ ಹಲವರು ಟ್ವೀಟ್ ಮಾಡುವ ಮೂಲಕ ಪ್ರಕಾಶ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಬಾಲಿವುಡ್ ನಟ ರಿತೇಶ್ ದೇಶ್‍ಮುಖ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಪ್ರಕಾಶ್ ಪವಾರ್ ಅವರೇ ನಿಮಗೆ ಅಭಿನಂದನೆ ಹಾಗೂ ನಿಮಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
प्रकाश पवारजी आपले अभिनंदन आणि आभार
— Riteish Deshmukh (@Riteishd) July 3, 2019