ಮುಂಬೈ: ಅಂಕಣಾಗಾರ್ತಿ ಶೋಭಾ ಡೇ ಪೊಲೀಸರನ್ನು ತಮಾಷೆ ಮಾಡಿದ್ದಕ್ಕೆ ಮುಂಬೈ ಪೊಲೀಸರು ಟ್ವಿಟ್ಟರ್‍ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಶೋಭಾ ಡೇ ಅವರು ಪೊಲೀಸ್ ಸಮವಸ್ತ್ರ ತೊಟ್ಟಿದ್ದ ದಢೂತಿ ವ್ಯಕ್ತಿಯೊಬ್ಬರ ಫೋಟೋವನ್ನು ಅಪ್ಲೋಡ್ ಮಾಡಿ ‘ಮುಂಬೈನಲ್ಲಿ ಇಂದು ಭಾರೀ ಪೊಲೀಸ್ ಬಂದೋಬಸ್ತ್’ ಎಂದು ಟೈಪಿಸಿ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದರು.
Advertisement
ಈ ಟ್ವೀಟ್‍ಗೆ ಮುಂಬೈ ಪೊಲೀಸರು,” ನಿಮ್ಮ ತಮಾಷೆಯನ್ನು ಇಷ್ಟ ಪಡುತ್ತೇವೆ. ಆದರೆ ಇದು ಅತಿ ಆಗಿದೆ ಎಂದು ಅನಿಸುತ್ತದೆ. ಸಮವಸ್ತ್ರದಲ್ಲಿರುವವರು ನಮ್ಮವರಲ್ಲ. ಜವಾಬ್ದಾರಿಯುತ ನಾಗರಿಕರಾದ ನಿಮ್ಮಿಂದ ನಾವು ಒಳ್ಳೆದನ್ನು ಬಯಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
ಈ ವಿಚಾರವನ್ನು ತಿಳಿದ ಜನ ಸಾಮಾಜಿಕ ಜಾಲತಾಣದಲ್ಲಿ ಶೋಭಾ ಡೇ ಅವರನ್ನು ಟೀಕೆ ಮಾಡುತ್ತಿದ್ದಾರೆ. ಶೋಭಾ ಡೇ ಅವರನ್ನು ವಿಶೇಷವಾಗಿ ‘ಜವಾಬ್ದಾರಿಯುತ ನಾಗರಿಕರು’ ಎಂದು ಉದಾಹರಣೆ ನೀಡಿ ಮುಂಬೈ ಪೊಲೀಸರು ಟ್ರಾಲ್ ಮಾಡಿದ್ದಾರೆ ಎಂದು ಜನ ಟ್ವೀಟ್ ಮಾಡಿದ್ದಾರೆ.
Advertisement
ಮಂಗಳವಾರ ರಾತ್ರಿ ಶೋಭಾ ಡೇಗೆ ಮುಂಬೈ ಪೊಲೀಸರು ಉತ್ತರ ನೀಡಿದ್ದು ಮಾತ್ರವಲ್ಲದೇ ತಮ್ಮ ಟ್ವೀಟನ್ನು ಪಿನ್ ಮಾಡಿದ್ದಾರೆ.
Advertisement
ಶೋಭಾ ಡೇ ಟ್ವಿಟ್ಟರ್ ನಲ್ಲಿ ವಿವಾದವನ್ನು ಸೃಷ್ಟಿಸುವುದು ಹೊಸದೆನಲ್ಲ. ಈ ಹಿಂದೆ ಒಲಿಂಪಿಕ್ಸ್ ವೇಳೆ, ಭಾರತೀಯರು ಪದಕ ಪಡೆಯಲು ಹೋಗಿಲ್ಲ, ಸೆಲ್ಫಿ ಕ್ಲಿಕ್ಕಿಸಲು ರಿಯೋಗೆ ಹೋಗಿದ್ದರು ಎನ್ನುವ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
@DeShobhaa if I zoom in the photo, I can see M.P. police written on his badge.Don’t keep tweeting nonsense. N yes, it amount to body-shaming
— Tark-vachaspati (@crashhgate) February 21, 2017
@MumbaiPolice well said but please forgive Shobha aunty ….its called attempted humour cum hallucinations as age sets in ????
— Suresh Menon #Kaabil (@sureshnmenon) February 21, 2017