ಮಂಗಳೂರು: ಮುಂಬೈ ಯುವಕನ ಲವ್ ಜಿಹಾದ್ ಪ್ರಕರಣ ಒಂದರಲ್ಲಿ ಮುಂಬೈ ಪೊಲೀಸರು ಮಂಗಳೂರಿನ ಬಜರಂಗದಳ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ರೇಷ್ಮಾಳನ್ನು ಮುಂಬೈ ಮೂಲದ ಮಹಮ್ಮದ್ ಇಕ್ಬಾಲ್ ಎಂಬಾತ ಅಪಹರಿಸಿ ಮುಂಬೈಗೊಯ್ದಿದ್ದು ಲವ್ ಜಿಹಾದ್ ನಡೆಸಿದ್ದಾಗಿ ಆರೋಪ ಕೇಳಿಬಂದಿತ್ತು. ಆದರೆ ಹದಿನೈದು ದಿನಗಳ ಹಿಂದೆ ರೇಷ್ಮಾಳನ್ನು ಮುಂಬೈನಲ್ಲಿ ಪತ್ತೆ ಮಾಡಿದ ಹೆತ್ತವರು ಮತ್ತು ಸಂಘಟನೆ ಸದಸ್ಯರು ಆಕೆಯನ್ನು ಮರಳಿ ಕರೆತಂದಿದ್ದರು.
Advertisement
Advertisement
ಇದಾದ ಬಳಿಕ ರೇಷ್ಮಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಕ್ಕೆ ಮಹಮ್ಮದ್ ಇಕ್ಬಾಲ್ ಈ ಬಗ್ಗೆ ಅಪಹರಣ ದೂರು ದಾಖಲಿಸಿದ್ದಲ್ಲದೆ, ಮುಂಬೈ ಹೈಕೋರ್ಟ್‍ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಮಂಗಳೂರಿಗೆ ಆಗಮಿಸಿದ ಮುಂಬೈನ ವಾಶಿ ಠಾಣೆಯ ಪೊಲೀಸರು ಬಜರಂಗದಳ ಕಾರ್ಯಕರ್ತ ಸುನಿಲ್ ಪಂಪ್ ವೆಲ್ ಎಂಬಾತನನ್ನು ಬಂಧಿಸಿದ್ದಾರೆ.
Advertisement
Advertisement
ರೇಷ್ಮಾಳನ್ನು ಅಪಹರಿಸಿದ ಆರೋಪದಲ್ಲಿ ಬಂಧಿಸಿದ್ದು ಮುಂಬೈಗೆ ಕರೆದೊಯ್ದಿದ್ದಾರೆ. ಆದರೆ ರೇಷ್ಮಾ ಪತ್ತೆ ಸಾಧ್ಯವಾಗಿಲ್ಲ. ಆಕೆಯನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದ ಇಕ್ಬಾಲ್, ಪ್ರೀತಿಯ ನೆಪದಲ್ಲಿ ಮುಂಬೈಗೆ ಕರೆದೊಯ್ದು ಮದುವೆಯಾಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು.
ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದೀಗ ಇಕ್ಬಾಲ್ ನೀಡಿದ ದೂರು ಸಂಘಟನೆಗೆ ಮುಳುವಾಗಿ ಪರಿಣಮಿಸಿದೆ.